ಬಾಲ್ಕನಿಯಲ್ಲಿ ಬೆತ್ತಲಾಗಿ ಪೋಸ್ ನೀಡ್ತಿದ್ದ ಮಹಿಳೆಯರೀಗ ಪೊಲೀಸರ ಅತಿಥಿ..!

ದುಬೈ: ತಮ್ಮ ಮನೆಯ ಬಾಲ್ಕನಿಯಲ್ಲಿ ಬೆತ್ತಲಾಗಿ ನಿಂತು ಪೋಸ್​ ಕೊಡ್ತಿದ್ದ ಮಹಿಳೆಯರೀಗ ಪೊಲೀಸರ ಅತಿಥಿಯಾಗಿದ್ದಾರೆ. ದುಬೈನ ಮರೀನಾ ಅಪಾರ್ಟ್​ಮೆಂಟ್​ನಲ್ಲಿರುವ ತಮ್ಮ ಫ್ಲಾಟ್​ನಲ್ಲಿ ಮಹಿಲೆಯರು ಈ ಕೃತ್ಯ ಎಸಗುತ್ತಿದ್ದರೆನ್ನಲಾಗಿದೆ.

ಮಹಿಳೆಯರು ಬೆತ್ತಲಾಗಿ ನಿಂತು ಖುದ್ದು ಲೈಂಗಿಕ ಚಟುವಟಿಕೆಗಳಿಗೆ ಆಹ್ವಾನ ನೀಡುವಂತಿದ್ದ ದೃಶ್ಯವನ್ನು ಎದುರು ಮನೆಯವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಸಾರ್ವಜನಿಕವಾಗಿ ಅಸಭ್ಯತೆ ಮೆರೆದ ಕಾರಣ ಈ ಎಲ್ಲರನ್ನು ಬಂಧಿಸಲಾಗಿದೆ ಎಂದು ದುಬೈ ಪೊಲೀಸರು ತಿಳಿಸಿದ್ದಾರೆ. ಪ್ರಚಾರದ ಗೀಳಿಗಾಗಿ ಈ ಯುವತಿಯರು ಬೆತ್ತಲಾಗಿದ್ದಾರೆ ಎಂದು ವರದಿಯಾಗಿದೆ.

ಈ ಯುವತಿಯರು ಮಾಡಿದಂಥ ಕೃತ್ಯಗಳಿಗೆ ಜೈಲು ಶಿಕ್ಷೆಯೊಂದಿಗೆ ದಂಡ ವಿಧಿಸುವ ಸಾಧ್ಯತೆಯಿದೆ. ಸದ್ಯಕ್ಕೆ ಬಂಧಿತರಾದ ಯುವತಿಯರನ್ನು ನ್ಯಾಯಾಂಗ ವಿಚಾರಣೆಗೆ ಒಳಪಡಿಸಲಾಗಿದೆ.

ಸೆರೆ ವಾಸ, 1 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾದ ವಿಡಿಯೋಗಳನ್ನು, ಲೈಂಗಿಕತೆಗೆ ಉತ್ತೇಜನ ನೀಡುವ ವಿಡಿಯೋ ಫೋಟೋ ಬಳಸುವಂತಿಲ್ಲ ಹಾಗೂ ಈ ರೀತಿಯ ಚಟುವಟಿಕೆಗಳಿಗೆ ಆಹ್ವಾನ ನೀಡುವಂತಿಲ್ಲ. ಅಕಸ್ಮಾತ್ ಈ ರೀತಿಯ ವರ್ತನೆಗಳು ಸಾರ್ವಜನಿಕರಲ್ಲಿ ಕಂಡು ಬಂದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!