ಕೊರೊನಾ ಸೋಂಕಿಗೆ ಬಲಿಯಾದ 130 ಶಿಕ್ಷಕರ ಕುಟುಂಬಗಳಿಗೆ ಅನುಕಂಪದ ಉದ್ಯೋಗ ನೀಡುವ ಮೂಲಕ ರಾಜ್ಯ ಸರಕಾರ ನೆರವಿನ ಹಸ್ತ ಚಾಚಿದೆ.
ಕೊರೊನಾ ವಾರಿಯರ್ಸ್ ಆಗಿ ಗುರುತಿಸಿಕೊಂಡಿದ್ದ ಶಿಕ್ಷಕ ಸಮುದಾಯ ರಾಜ್ಯ ಉಪ ಚುನಾವಣೆ ಸೇರಿದಂತೆ ನಾನಾ ಸರಕಾರಿ ಕರ್ತವ್ಯ ನಿರ್ವಹಿಸಿದ್ದರು.
ಕೊರೊನಾ ಸೋಂಕಿನಿಂದ 130 ಕುಟುಂಬಗಳಿಗೆ ಅನುಕಂಪದ ಆಧಾರದ ಮೇಲೆ ಮೃತಪಟ್ಟಿದ್ದು, ಮೃತ ಕುಟುಂಬಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇಮಕಾತಿ ಪತ್ರ ನೀಡಿದರು.
ಗುರುವಾರ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಲ್ಲಿ ಶಿಕ್ಷಕ ಕುಟುಂಬಗಳಿಗೆ ಸುರೇಶ್ ಕುಮಾರ್ ನೇಮಕಾತಿ ಪತ್ರ ವಿತರಿಸಿದರು.
ರಾಜ್ಯದಲ್ಲಿ ಸರ್ಕಾರಿ, ಖಾಸಗಿ ಶಾಲೆಯ 682 ಶಿಕ್ಷಕರು ಕೊರೊನಾ ಸೋಂಕಿಗೆ ಇದುವರೆಗೆ ಬಲಿಯಾಗಿದ್ದಾರೆ.