7ನೇ ತರಗತಿ ವಿದ್ಯಾರ್ಥಿ ( student ) ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ . ತುಮಕೂರಿನ ( tumakuru ) ಊರ್ಡಿಗೆರೆಯಲ್ಲಿ ನಡೆದಿದೆ . ಊರ್ಡಿಗೆರೆ ಸರ್ಕಾರಿ ಶಾಲೆಯ ಬಾಲಕ ಅಜಯ್ ( ajay ) ಆತ್ಮಹತ್ಯೆಗೆ ಯತ್ನಿಸಿದ್ದಾನೆ .
ಇಂಗ್ಲೀಷ್ ( English ) ಓದಲು ಕಷ್ಟವಾಗುತ್ತೆ ಶಾಲೆಗೆ ಹೋಗಲ್ಲ ಎಂದು ಬಾಲಕ ಹಠ ಮಾಡುತ್ತಿದ್ದ ಶಾಲೆಗೆ ಹೋಗುವಂತೆ ಪೋಷಕರು (Parents ) ತಿಳಿಸಿದ್ದರು . ನಿನ್ನೆ ಬೆಳಗ್ಗೆ 7 ಗಂಟೆ ಸಮಯದಲ್ಲಿ ಶಾಲೆಗೆ ಹೋಗುವುದಿಲ್ಲ ಎಂದು ಮನೆಯಲ್ಲಿದ್ದ ಕ್ರಿಮಿನಾಶಕವನ್ನು ಅಜಯ್ ಸೇವಿಸಿದ್ದಾನೆ . ಮನೆಯಲ್ಲಿ ಕುಸಿದ ಬಾಲಕನನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ . ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ . ಬಾಲಕ ಅಜಯ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ . ತುಮಕೂರು ನಗರದ ಕೋತಿ ತೋಪು ಮೂಲದ ಸೋಮಶೇಖರ್, ಜಯಮ್ಮ ದಂಪತಿಯ ಮಗ. ಕೂಲಿ ಕೆಲಸ ಮಾಡುತ್ತಾ ಸೋಮಶೇಖರ್ ಜೀವನ ನಡೆಸುತ್ತಿದ್ದರು .
ಕೂಲಿ ಕೆಲಸ ನಿಮಿತ್ತವಾಗಿ ಊರ್ಡಿಗೆರೆ ಗ್ರಾಮಕ್ಕೆ ಅಜಯ್ ಕುಟುಂಬ ವಲಸೆ ಬಂದಿತ್ತು. ಒಂದೆರಡು ದಿನ ಬಾಲಕ ಶಾಲೆಗೆ ಹೋಗಿದ್ದ . ಬಳಿಕ ಶಾಲೆಗೆ ಹೋಗುವುದಿಲ್ಲ ಎಂದು ಅಜಯ್ ಹಠ ಮಾಡಿದ್ದಾನೆ . ಶಾಲೆಗೆ ಹೋಗುವಂತೆ ಪೋಷಕರು ಬಾಲಕನಿಗೆ ಒತ್ತಾಯಿಸಿದ್ದಾರೆ. ಬಾಲಕನ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದ ಹಾಗೆ ಆಸ್ಪತ್ರೆಗೆ ತುಮಕೂರಿನ ಬಿಇಓ ಹನುಮ ನಾಯಕ್ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ . ಇದನ್ನೂ ಓದಿ : – ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ – ನಳೀನ್ ಕುಮಾರ್ ಕಟೀಲ್