ಯುವ ನಿರ್ದೇಶಕ ರಾಜಶೇಖರ್ ಕೊರೊನಾ ಸೋಂಕಿನಿಂದ ಶನಿವಾರ ಮೃತಪಟ್ಟಿದ್ದಾರೆ. ಈ ಮೂಲಕ ಕೊರೊನಾ ಎರಡನೇ ಅಲೆಗೆ ಕನ್ನಡ ಚಿತ್ರರಂಗ ತತ್ತರಿಸಿದ್ದು, ನಿರ್ಮಾಪಕರನ್ನು ಬಲಿ ತೆಗೆದುಕೊಂಡ 3ನೇ ಪ್ರಕರಣ ಇದಾಗಿದೆ.
ಕೊರೊನಾ ಎರಡನೇ ಅಲೆ ಜೋರಾಗಿದ್ದು, ಈ ಹಿನ್ನೆಲೆಯಲ್ಲಿ ಇತ್ತಿಚೆಗೆ ನಿರ್ಮಾಪಕ ಕೋಟಿ ರಾಮು ಕೂಡಾ ಕೊರಾನಾಗೆ ಬಲಿಯಾಗಿದ್ದರು. ಅಷ್ಟೇ ಅಲ್ದೆ ಸಾಕಷ್ಟು ಕಲಾವಿದರು, ನಿರ್ದೇಶಕರುಗಳು ಕೊರಾನಾಗೆ ಬಲಿಯಾಗಿದ್ದಾರೆ. ಅದೇ ಸಾಲಿನಲ್ಲಿ ಸಿನಿಮಾ ಬಗ್ಗೆ ತುಂಬಾ ದೊಡ್ಡ ಕನಸು ಹೊತ್ತಿದ್ದ ಯುವ ನಿರ್ಮಾಪಕ ರಾಜಶೇಖರ್ ಕೊರೊನಾಗೆ ತುತ್ತಾಗಿದ್ದಾರೆ.
ನಿರ್ದೇಶಕ ಸೂರಿ ಗರಡಿಯಲ್ಲಿ ಡಾಲಿ ಧನಂಜಯ್ ಅವರ ಪಾಪ್ ಕಾರ್ನ್ ಮಂಕಿಟೈಗರ್, ಅಭಿಷೇಕ್ ಅಂಬರೀಶ್ ನಟನೆ ಬ್ಯಾಡ್ ಮ್ಯಾನರ್ಸ್, ಪೆಟ್ರೋಮ್ಯಾಕ್ಸ್ ಚಿತ್ರಗಳ ಉತ್ಸಾಹಿ ನಿರ್ಮಾಪಕರಾಗಿದ್ದ ರಾಜಶೇಖರ್ ಕೊರೊನಾಗೆ ಬಲಿಯಾಗಿದ್ದಾರೆ.