ಮುಂಬೈ: ಮಹಾರಾಷ್ಟ್ರದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮುಂಬೈನ ಕುರ್ಲಾ ಪ್ರದೇಶದಲ್ಲಿರುವ ಬೃಹತ್ ಸ್ಕ್ರಾಪ್ ಗೋಡೌನ್ಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಪ್ರಸ್ತುತ ಬೆಂಕಿಯನ್ನು ನಂದಿಸಲು ಹಲವಾರು ಮಂದಿ ಹಾಗೂ ಅಗ್ನಿಶಾಮಕ ದಳದವರು ಹರಸಾಹಸ ಪಡುತ್ತಿದ್ದು, ಅದರಿಂದಾದ ನಷ್ಟಗಳ ಕುರಿತು ಇನ್ನು ವರದಿ ಲಭ್ಯವಾಗಿಲ್ಲ. ಪ್ರಾಣಹಾನಿಯಾದ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಹೇಳಿದೆ.
ಈ ವರ್ಷದ ಆರಂಭದಿಂದಲೂ ಮುಂಬೈನಲ್ಲಿ ಸಾಕಷ್ಟು ಅಗ್ನಿ ಅವಘಟಗಳಿ ಸಂಭವಿಸುತ್ತಿವೆ. ಕಳೆದ ಫೆಬ್ರುವರಿಯಲ್ಲಿ ಗೋರೆಗಾಂವ್ ವೆಸ್ಟ್ನ ಸ್ಟುಡಿಯೋದಲ್ಲಿ ಇದ್ದಕ್ಕಿದ್ದ ಹಾಗೆ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತುಈ ಸ್ಟುಡಿಯೋ ನಗರದ ಇನೋರ್ಬಿಟ್ ಮಾಲ್ ಬಳಿ ಇದೆ.
ಗೋರೆಗಾಂವ್ ಫಿಲ್ಮ್ ಸ್ಟುಡಿಯೋಗಳ ಕೇಂದ್ರವಾಗಿದೆ ಮತ್ತು ಪ್ರಸಿದ್ಧ ಫಿಲ್ಮ್ ಸಿಟಿ ಗೋರೆಗಾಂವ್ ನ ಪೂರ್ವದಲ್ಲಿದೆ. ಇದಕ್ಕೂ ಮುನ್ನ ಮಹಾರಾಷ್ಟ್ರದ ಭಿವಾಂಡಿಯ ಎಂಐಡಿಸಿ ಪ್ರದೇಶದ ಗೋಡೌನ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.