ಬೆಂಗಳೂರು: ಒಂದೆಲಗ ಸೊಪ್ಪು ಹೆಚ್ಚಾಗಿ ನಿರಿನ ಆಶ್ರಯದಲ್ಲಿ ಬೆಳೆಯುವ ಸಸ್ಯ. ಒಂದೇ ಎಲೆಯಿಂದ ಕಂಗೊಳಿಸುವ ಈ ಸಸ್ಯದಲ್ಲಿ ಆರೋಗ್ಯದ ಗುಟ್ಟುಗಳಿವೆ. ಬ್ರಾಹ್ಮಿ ಎಂಬುದಾಗಿಯೂ ಕರೆಯಲ್ಪಡುವ ಈ ಸೊಪ್ಪು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಆಯುರ್ವೇದದಲ್ಲಿ ಒಂದೆಲಗದ ಹಲವಾರು ಬಗೆಯ ಔಷಧಗಳು ದೊರಕುತ್ತವೆ.
ಒಂದೆಲಗ ಸೇವನೆ ದೇಹಕ್ಕೆ, ಮನಸ್ಸಿಗೆ ತಂಪು ತರುವುದು ಮಾತ್ರವಲ್ಲದೆ ಸ್ಮರಣಶಕ್ತಿಯನ್ನೂ ವರ್ಧಿಸುತ್ತದೆ ಎಂಬ ನಂಬಿಕೆಯಿದೆ
ಮಕ್ಕಳಿಗೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದರ ಎರಡೆರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಮಕ್ಕಳ ಜ್ಞಾಪಕಶಕ್ತಿ ಹೆಚ್ಚುತ್ತದೆ.
ಒಂದೆಲಗ ಸೊಪ್ಪನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿ ಮಧುಮೇಹಿಗಳಿಗೆ ದಿನನಿತ್ಯ ನೀಡಿದರೆ ಸಕ್ಕರೆ ಕಾಯಿಲೆಯನ್ನೂ ನಿಯಂತ್ರಿಸಬಹುದು.
ಕೆಮ್ಮು, ಉಸಿರಾಟದ ತೊಂದರೆ ಇರುವವರು ಇದರ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸಬಹುದು.
ಮಲಬದ್ದತೆಯಿಂದ ಬಳಲುವವರು ಒಂದೆಲಗದ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸಬಹುದು.
ಒಂದೆಲಗ ಸೇವನೆ ದೇಹಕ್ಕೆ, ಮನಸ್ಸಿಗೆ ತಂಪು ತರುವುದು ಮಾತ್ರವಲ್ಲದೆ ಸ್ಮರಣಶಕ್ತಿಯನ್ನೂ ವರ್ಧಿಸುತ್ತದೆ ಎಂಬ ನಂಬಿಕೆಯಿದೆ. ಮಕ್ಕಳಿಗೆ ಬೆಳಗ್ಗೆ ಇದರ ಎರಡೆರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಮಕ್ಕಳ ಜ್ಞಾಪಕಶಕ್ತಿ ಹೆಚ್ಚುತ್ತದೆ.
ಒಂದೆಲಗದ ರಸಕ್ಕೆ ಕೊಬ್ಬರಿ ಎಣ್ಣೆ ಸೇರಿಸಿ ತಯಾರಿಸಿದ ಎಣ್ಣೆಯಿಂದ ಕೂದಲು ಸೋಂಪಾಗಿ ಬೆಳೆಯುತ್ತದೆ. ಇದರ ತೈಲ ಮಾರುಕಟ್ಟೆಗಳಲ್ಲೂ ಸಿಗುತ್ತದೆ.
ದೇಹದ ಉಷ್ಣತೆ ನಿವಾರಿಸಲು ಒಂದೆಲಗದ ತಂಬುಳಿ ದಿವ್ಯೌಷಧ.