ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರು ಮದುವೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಲಭಿಸಿದ್ದು, ಗಂಡನ ವಿರುದ್ಧವೇ ಲೈಂಗಿಕ ದೌರ್ಜನ್ಯ ದೂರು ಸಲ್ಲಿಸಿದ್ದಾರೆ.
ಬಸವನಗುಡಿ ಮಹಿಳಾ ಠಾಣೆಯಲ್ಲಿ ಚೈತ್ರಾ ಕೋಟೂರು ಸೋಮವಾರ ಗಂಡ ನಾಗಾರ್ಜುನ ವಿರುದ್ಧವೇ ದೂರು ನೀಡಿದ್ದಾರೆ.
ಇತ್ತೀಚೆಗಷ್ಟೇ ವಿವಾಹವಾಗಿದ್ದ ಚೈತ್ರಾ ಕೋಟೋರು ವೈವಾಹಿಕ ಜೀವನ ವಿವಾದಕ್ಕೆ ತಿರುಗಿದ್ದು, ಗಂಡ ನಾಗಾರ್ಜುನ ಹಾಗೂ ಆತನ ಕುಟುಂಬಸ್ಥರು ಬಲವಂತವಾಗಿ ಮದುವೆ ಆಗಿದ್ದಾಳೆ. ನಮಗೆ ಈ ಮದುವೆ ಇಷ್ಟ ಇಲ್ಲ ಅಂತ ದೂರ ಹೋಗಿದ್ದರು.
ಇದರಿಂದ ನೊಂದ ಚೈತ್ರಾ ಕೋಟೂರು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿರುವ ನಾಗಾರ್ಜುನ ದೌರ್ಜನ್ಯ ಎಸಗಿದ್ದು, ಗಂಡನನ್ನ ಕರೆಸಿ ಬುದ್ದಿವಾದ ಹೇಳುವಂತೆ ದೂರಿನಲ್ಲಿ ಆರೋಪಿಸಿದ್ದಾರೆ.
ತನ್ನ ಜೊತೆ ಸಂಸಾರ ಮಾಡುವುದಿಲ್ಲ ಎಂದು ನಾಗರ್ಜುನ್ ಹೇಳುತ್ತಿದ್ದಾರೆ. ಈ ಬಗ್ಗೆ ಅವರನ್ನ ಕರೆಸಿ ಬುದ್ದಿವಾದ ಹೇಳಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಬಸವನಗುಡಿ ಮಹಿಳಾ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.