ಬೆಂಗಳೂರು: ಸಿಡಿ ಪ್ರಕರಣದ ಹಿಂದೆ ಇರುವ ಮಹಾನಾಯಕ ಡಿ ಕೆ ಶಿವಕುಮಾರ್ ಗಂಡಸಲ್ಲ, ನಾನು ಗಂಡಸು ಅವನ ವಿರುದ್ದ ದೂರು ಕೊಡುತ್ತೇನೆ ಎಂದು ಡಿಕೆಶಿ ವಿರುದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಸಿಡಿ ಯುವತಿಯ ಪೋಷಕರ ಹೇಳಿಕೆಯ ಬೆನ್ನಲ್ಲೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಬಳಿ 11 ಸಾಕ್ಷ್ಯಗಳಿಗೆ ಅವುಗಳನ್ನು ಎಸ್ಐಟಿ ಅಧಿಕಾರಿಗಳಿಗೆ ಕೊಡುತ್ತೇನೆ. ಆ ಯುವತಿ ಯಾರೆಂದು ನನಗೆ ಗೊತ್ತಿರಲಲ್ಲ ಇಂದು ಗೊತ್ತಾಗಿದೆ. ನಾನು ತಪ್ಪು ಮಾಡಿದ್ರೆ ಜೈಲಿಗೆ ಹೋಗಲು ಸಿದ್ದ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಡಿ ಪ್ರಕರಣದ ಹಿಂದೆ ಡಿ.ಕೆ.ಶಿವಕುಮಾರ್ ಷಢ್ಯಂತ್ರ ಇದೆ ಎಂದು ಯುವತಿಯ ಪೋಷಕರೇ ಆರೋಪ ಮಾಡಿದ್ದಾರೆ. ಅವರು ರಾಜಕಾರಣದಲ್ಲಿರಲು ನಾಲಾಯಕ್. ಗೋಕಾಕದಲ್ಲಿ ನನ್ನ ತಮ್ಮನನ್ನು ಚುನಾವಣೆಗೆ ನಿಲ್ಲಿಸಿ ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ನನ್ನು ಸೋಲಿಸಲು ಏನು ಬೇಕೋ ಅದನ್ನು ಮಾಡುತ್ತೇನೆ ಎಂದು ನೇರವಾಗಿ ಸವಾಲ್ ಹಾಕಿದರು.
ನನ್ನ ಬಳಿ ನಿಮಗೇ ಶಾಕ್ ಆಗುವಂತ ಸಾಕ್ಷಿ ಇದೆ. ನಾಳೆಯಿಂದ ನಮ್ಮ ಆಟ ಶುರು. ಶನಿವಾರ ಸಂಜೆ 4 ಗಂಟೆಯಿಂದ 6 ಗಂಟೆಯೊಳಗೆ ಬಾಂಬ್ ಸಿಡಿಸುತ್ತೇನೆ ಎಂದು ನಿನ್ನೆ ಘೋಷಿಸಿದ್ದ ರಮೇಶ ಜಾರಕಿಹೊಳಿ ಘೋಷಿಸಿದ್ದರು.