ನಿಮ್ಮ ಹೊಲಸು ರಾಜಕಾರಣಕ್ಕೆ ನನ್ನ ಮಗಳನ್ನು ಬಲಿಪಶು ಮಾಡಿದ್ದೀರಿ. ನನ್ನ ಮಗಳೇ ಬೇಕಿತ್ತಾ ಎಂದು ಸಿಡಿ ಪ್ರಕರಣದ ಯುವತಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಎಸ್ ಐಟಿ ಟೆಕ್ನಿಕಲ್ ವಿಂಗ್ ನಲ್ಲಿ ಇಡೀ ದಿನ ವಿಚಾರಣೆ ಎದುರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯುವತಿಯ ಪೋಷಕರು, ಸಿಡಿ ಪ್ರಕರಣದ ಹಿಂದೆ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದರು.
ನನ್ನ ಮಗಳನ್ನು ಗೋವಾಗೆ ಕಳುಹಿಸಿರುವುದೇ ಡಿಕೆ ಶಿವಕುಮಾರ್, ನಮ್ಮ ಬಳಿ ಸಾಕ್ಷ್ಯಗಳಿವೆ. ಈ ಸಾಕ್ಷ್ಯಗಳನ್ನು ಅಧಿಕಾರಿಗಳಿಗೆ ನೀಡಿದ್ದೇವೆ ಎಂದು ತಂದೆ ಆರೋಪಿಸಿದರೆ, ನನ್ನ ಅಕ್ಕನನ್ನು ಡಿಕೆ ಶಿವಕುಮಾರ್ ಒತ್ತೆ ಇರಿಸಿಕೊಂಡಿದ್ದಾರೆ ಎಂದು ಸೋದರ ಆರೋಪಿಸಿದ್ದಾರೆ.
ನೀವು ಗಂಡಸು ಆಗಿದ್ದರೆ ಎದುರು ಬಂದು ಹೋರಾಡಿ. ಅದನ್ನು ಬಿಟ್ಟು ಹೆಣ್ಣು ಮಗಳನ್ನು ಇಟ್ಟುಕೊಂಡು ರಾಜಕರಾಣ ಮಾಡುತ್ತೀರಾ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.