ವರದಿ : ಧನು ಯಲಗಚ್
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ, ಕನ್ನಡದ ಸಿನಿಮಾಗಳು ಎಲ್ಲೆಡೆ ಭಾರೀ ಸೌಂಡ್ ಮಾಡ್ತಿವೆ. ಕೇವಲ ಕನ್ನಡ ನಾಡಿನಲ್ಲಷ್ಟೇ ಅಲ್ಲ, ಪಕ್ಕದ ಆಂಧ್ರ ಮತ್ತು ತಮಿಳುನಾಡಿನಲ್ಲಿಯೂ ಕನ್ನಡದ ಡಿಂಡಿಮ ಮೊಳಗ್ತಿದೆ.
ಅದೊಂದು ಕಾಲದಲ್ಲಿ ಕನ್ನಡದ ಸಿನಿಮಾಗಳು ಕರ್ನಾಟಕದಲ್ಲಿ ಬಿಡುಗಡೆಯಾಗೋದು ಬಿಟ್ರೆ, ಟಾಲಿವುಡ್ ಹಾಗೂ ಕಾಲಿವುಡ್‍ನಲ್ಲಿ ಬಿಡುಗಡೆಯಾಗೋಕೆ ಹರಸಾಹಸ ಮಾಡ್ಬೇಕಿತ್ತು. ಆದ್ರೆ ಈಗ ಹಾಗಾಗಿಲ್ಲ, ಕಾಲ ಬದಲಾಗಿದೆ. ಕನ್ನಡದ ಸಿನಿಮಾಗಳಿಗೆ ಪರರಾಜ್ಯದಲ್ಲೂ ಬೇಡಿಕೆಯಿದೆ. ಅದು ಈಗಾಗ್ಲೇ ಪೊಗರು ಹಾಗೂ ರಾಬರ್ಟ್ ಸಿನಿಮಾಗಳ ಮೂಲಕ ಪ್ರೂವ್ ಆಗಿದ್ದು, ಇದೇ ಏಪ್ರಿಲ್ 1ಕ್ಕೆ ಯುವರತ್ನ ತೆಲುಗು ಹಾಗೂ ಕನ್ನಡದಲ್ಲಿ ರಿಲೀಸ್ ಆಗ್ತಿದೆ.
ಕನ್ನಡ ಸಿನಿಮಾಗಳಂದ್ರೆ ಏನೋ ಬೇಕಾಬಿಟ್ಟಿಯಾಗಿ ನೋಡ್ತಿದ್ದ ಆಂಧ್ರನಾಡಲ್ಲಿ ಕನ್ನಡ ಸಿನಿಮಾಗಳದ್ದೇ ಜಾತ್ರೆ ಶುರುವಾಗಿದೆ. ನಾವು ಯಾರಿಗೂ ಕಮ್ಮಿ ಇಲ್ಲ ಅಂತಾ ಕನ್ನಡದ ಸಿನಿಮಾಗಳೂ ಕೂಡಾ ಒಳ್ಳೆ ಕಂಟೆಂಟ್, ಡಿಫರೆಂಟ್ ಮೇಕಿಂಗ್, ಬಗೆ ಬಗೆಯ ಸಾಂಗ್ಸ್ ಹೀಗೆ ಅದ್ಭುತವಾಗಿ ನಿರ್ಮಾಣವಾಗಿರುವ ಕನ್ನಡ ಸಿನಿಮಾಗಳಿಗೆ ಆಕರ್ಷಿತರಾಗ್ತಿದ್ದಾರೆ.
ಈಗಾಗ್ಲೇ ಧ್ರುವ ಸರ್ಜಾ ಅಭಿನಯದ ಪೊಗರು ಹಾಗೂ ಚಾಲೆಂಜಿಂಗ್‍ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಆಂಧ್ರ ನಾಡಲ್ಲಿ ಸದ್ದು ಮಾಡಿವೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಇದೇ ಏಪ್ರಿಲ್ 1ಕ್ಕೆ ತೆರೆಗೆ ಬರ್ತಿದೆ ಈ ಸಿನಿಮಾ ಕೂಡಾ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗ್ತಿದೆ. ಇದೀಗ ಅದೇ ಸಾಲಿನಲ್ಲಿ ಕನ್ನಡದ ಮೋಸ್ಟ್ ಅವೈಟೆಡ್ ಸಿನಿಮಾ ಕೋಟಿಗೊಬ್ಬ-3 ಕೂಡಾ ಪರರಾಜ್ಯದಲ್ಲಿ ಮಿಂಚೋಕೆ ರೆಡಿಯಾಗಿದೆ.
ಕೋಟಿಗೊಬ್ಬ ರೆಡಿ ಧಮ್ ಇದ್ರೆ ಹಿಡಿ ಅಂತಾ ಕಿಚ್ಚ ಕೂಡಾ ಟಾಲಿವುಡ್ ಅಂಗಳದಲ್ಲಿ ಪಟಾಕಿ ಹೊಡೆಯಲು ರೆಡಿಯಾಗಿದೆ. ಇದು ಕನ್ನಡಿಗರು ಮತ್ತಷ್ಟು ಗರ್ವ ಪಡಲು ಮತ್ತೊಂದು ಕಾರಣವಾಗಿದೆ.