ಬೆಂಗಳೂರು: ಕಡಿಮೆ ಬಡ್ಡಿದರದಲ್ಲಿ ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಪ್ರಮುಖ ಆರೋಪಿಯನ್ನ ಬಂಧಿಸಿದ್ದಾರೆ. ಎ. ಹರಿನಾಡರ್ ಅಲಿಯಾಸ್ ಹರಿ ಗೋಪಾಲಕೃಷ್ಣ ನಾಡರ್ ಎಂದು ಗುರುತಿಸಲಾಗಿದೆ.
ಕೇರಳದ ಹರಿ, ತನ್ನದೇ ರಾಜ್ಯದ ರಂಜಿತ್ ಪಣಿಕ್ಕರ್ ಹಾಗೂ ಇತರರ ಜೊತೆ ಸೇರಿ ಕೃತ್ಯ ಎಸಗಿದ್ದ. ಒಟ್ಟು 7,20 ಕೋಟಿ ರೂ ಹಣವನ್ನು ಎ.ಹರಿ ನಾಡರ್ ಹರಿ ಗೋಪಾಲಕೃಷ್ಣ ನಾಡರ್ ಬೆಂಗಳೂರಿನ ಉದ್ಯಮಿ ಅವರ ಕಂಪನಿ ಆಕೌಂಟ್ ನಿಂದ ವರ್ಗಾವಣೆ ಪಡೆದು ಸಾಲ ಕೊಡಿಸದೆ, ಪಡೆದುಕೊಂಡಿದ್ದ 7.20 ಕೋಟಿ ರೂ. ಹಣವನ್ನು ಕೊಡದೆ ಮೋಸ ಮಾಡಿದ್ದನು. ಜತೆಗೆ ಹಣ ಕೇಳಿದ್ದಕ್ಕೆ ಪ್ರಾಣ ಬೆದರಿಕೆಯನ್ನು ಹಾಕಿದ್ದನು. ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಸಂಬಂಧ ಸಿಸಿಬಿ ವಿಶೇಷ ತಂಡ ಪ್ರಕರಣದ ಪ್ರಮುಖ ಆರೋಪಿ ಎ.ಹರಿ ನಾಡರ್ ಆ ಹರಿ ಗೋಪಾಲಕೃಷ್ಣ ನಾಡರ್, ತಿರುನಲ್ ವೇಲಿ ಜಿಲ್ಲೆ, ತಮಿಳುನಾಡು ಎಂಬಾತನನ್ನು ಕೇರಳ ಕೋವಲಂ ನಲ್ಲಿ ವಶಕ್ಕೆ ಪಡೆದು ಆರೋಪಿಯಿಂದ ಸುಮಾರು ಎರಡು ಕೋಟಿ ರೂ. ಬೆಲೆ ಬಾಳುವ 3,893 ಗ್ರಾಂ ತೂಕದ ಚಿನ್ನಾಭರಣ, 8.76.916 ರೂ. ನಗದು ಹಣ ಹಾಗು ಇನೋವಾ ಕ್ರಿಸ್ಟ ಕಾರ್ ಅನ್ನು ವಶಕ್ಕೆ ಪಡೆದಿದ್ದಾರೆ.