ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್ ಮತ್ತು ಇನ್ ಸ್ಟಾಗ್ರಾಂ ನಾಳೆಯಿಂದ ಭಾರತದಲ್ಲಿ ನಿಷೇಧಕ್ಕೆ ಗುರಿಯಾಗುವ ಸಾಧ್ಯತೆ ಇದೆ.
ಕೇಂದ್ರ ಸರಕಾರ ಹೊಸದಾಗಿ ಜಾರಿಗೆ ತಂದಿರುವ ಮಧ್ಯಂತರ ನಿಯಮಗಳನ್ನು ಜಾರಿಗೆ ತರಲು ಮೇ 25ರ ಗಡುವು ನೀಡಲಾಗಿದ್ದು, ಫೇಸ್ ಬುಕ್, ಟ್ವಿಟರ್ ಮತ್ತು ಇನ್ ಸ್ಟಾಗ್ರಾಂಗಳು ಆಡಳಿತ ಮಂಡಳಿಗಳು ಈ ನಿಯಮಕ್ಕೆ ಇಂದು ಒಪ್ಪಿಗೆ ನೀಡದೇ ಇದ್ದಲ್ಲಿ ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇದೆ.
ಪ್ರಸ್ತುತ `ಕೂ’ ಟ್ವಿಟರ್ ಆ್ಯಪ್ ಮಾತ್ರ ಭಾರತದ ನಿಯಮಗಳಿಗೆ ಅನುಸಾರವಾಗಿ ಚಾಲನೆಗೆ ಬಂದಿದೆ. ಮೇ 2021ರವರೆಗೆ ಈ ಹಿಂದೆ ಗಡುವು ನೀಡಲಾಗಿತ್ತು. ಆದರೆ ಕೇಂದ್ರ ವಿಜ್ಞಾನ್ ಮತ್ತು ತಂತ್ರಜ್ಞಾನ ಸಚಿವಾಲಯ ಗಡುವನ್ನು ಮೂರು ತಿಂಗಳಿಗೆ ವಿಸ್ತರಿಸಿದ್ದು, ಇಂದಿನಗೆ ಅಂತ್ಯಗೊಳ್ಳಲಿದೆ.