ಕೋಲಾರ : ತಾಲೂಕಿನ ಬೆತ್ತನಿ ಗ್ರಾಮದ ಬಳಿ ಇರುವ ಬಟ್ಟೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ 33 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಗಾರ್ಮೆಂಟ್ಸ್ನಲ್ಲಿ ಒಟ್ಟು ಸಾವಿರ ಜನರಿಗೆ ಕೊರೋನಾ ಟೆಸ್ಟ್ ಮಾಡಲಾಗಿತ್ತು ಈ ಪೈಕಿ 33 ಜನರಿಗೆ ಪಾಸಿಟಿವ್ ಬಂದಿದೆ.
ಎರಡು ದಿನ ಕಂಟೋನ್ಮೆಂಟ್ ಮಾಡುತ್ತೇವೆ ಎಂದು ಖುದ್ದು DHO ಹೇಳಿದ್ದರು ಆದರೆ, ಇದುವರೆಗೂ ಕಂಟೋನ್ಮೆಂಟ್ ಮಾಡದೆ ಆರೋಗ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ ವಹಿಸಿದೆ.
ಗಾರ್ಮೆಂಟ್ಸ್ ಒಳಗೆ ಆತಂಕದಲ್ಲಿ ಸಾವಿರಾರು ಮಹಿಳೆಯರು ಕೆಲಸ ಮಾಡುತ್ತಿದ್ದು. ಆರೋಗ್ಯ ಇಲಾಖೆಯ ವಿರುದ್ದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.