ಮೈಸೂರು: ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ಸೋತಿದೆ. ನಿಮಗೆ ಕಣ್ಣು ಕಾಣಲ್ಲ, ಕಿವಿ ಕೇಳಿಸಲ್ಲ, ಪ್ರಸೆನ್ಸ್ ಆಫ್ ಮೈಡ್ ಇಲ್ಲ. ನಿಮ್ಮನ್ನ ಕಟ್ಟಿಕೊಂಡು ನಾವೇನ್ ಮಾಡೋಣ ಎಂದು ಎಂಎಲ್ಸಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ಸೋತಿದೆ. ಮುಖ್ಯಮಂತ್ರಿಯೂ ಸರಿ ಇಲ್ಲ. ಮುಖ್ಯಮಂತ್ರಿ ಬಳಿ ಹೋಯ್ತು ಅಂದ್ರೆ ಆ ಖಾತೆ ಸತ್ತು ಹೋಯ್ತು ಅಂತ ಅರ್ಥ. ನೀವೇ ಬಿಬಿಎಂಪಿ ಸಚಿವರಾಗಿದ್ದೀರಿ. ರಾಜಧಾನಿ ಬೆಂಗಳೂರು ಕೋವಿಡ್‌ನಿಂದ ತತ್ತರಿಸಿ ಹೋಗುತ್ತಿದೆ. ನೀವು ಎಂದಾದರೂ ಆಚೆ ಬಂದು ನೋಡಿದ್ದೀರಾ ಎಂದು ಪ್ರಶ್ನಿಸಿದರು.
ಆರೋಗ್ಯ ಸಚಿವ ಸುಧಾಕರ್ ಅವರಯ ರಾಷ್ಟ್ರಮಟ್ಟದ ಅಧಿಕಾರಿಗಳ ಜೊತೆ ಮಾಹಿತಿ ಪಡೆದುಕೊಂಡಿದ್ದರು. ಆದರೆ, ಇದೀಗ ಅವರ ದ್ರೌಪತಿ ವಸ್ತ್ರಾಭರಣ ಆಗಿದೆ. ಅವರ ಎಲ್ಲ ಅಧಿಕಾರ ಕಿತ್ತು ಸಚಿವ ಜಗದೀಶ್ ಶೆಟ್ಟರ್, ಡಿಸಿಎಂ ಅಶ್ವಥ್ ನಾರಾಯಣ್ ಹಾಗೂ ಸಚಿವ ಆರ್.ಅಶೋಕ್ ಗೆ ಕೊಟ್ಟಿದ್ದಾರೆ ಎಂದರು.