ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಘೋಷಣೆ ಬೆನ್ನಲ್ಲೇ ದೇಶದಲ್ಲಿ ಸತತ 2ನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಸತತ ಏರಿಕೆ ಕಂಡಿದೆ.
ಪೆಟ್ರೋಲ್ ದರ ಲೀಟರ್ ಗೆ 19 ಪೈಸೆ ಏರಿಕೆಯಾದರೆ ಡೀಸೆಲ್ ಬೆಲೆ ಲೀಟರ್ ಗೆ 21 ಪೈಸೆಯಷ್ಟು ಏರಿಕೆಯಾಗಿದೆ. ಇದರಿಂದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಇಂದು ಲೀಟರ್ ಗೆ 90 ರೂಪಾಯಿ 74 ಪೈಸೆಗೆ ಏರಿಕೆಯಾದರೆ, ಡೀಸೆಲ್ ದರ 81 ರೂಪಾಯಿ 12 ಪೈಸೆಯಾಗಿದೆ. ಮುಂಬೈಯಲ್ಲಿ ಪೆಟ್ರೋಲ್ ದರ ಇಂದು ಲೀಟರ್ ಗೆ 97 ರೂಪಾಯಿ 12 ಪೈಸೆಯಾಗಿದ್ದರೆ ಡೀಸೆಲ್ ಬೆಲೆ ಲೀಟರ್ ಗೆ 88 ರೂಪಾಯಿ 19 ಪೈಸೆಯಷ್ಟಾಗಿದೆ.
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಲೀಟರ್ ಗೆ 93 ರೂಪಾಯಿ 77 ಪೈಸೆಯಿದ್ದು, ಡೀಸೆಲ್ ದರ 86 ರೂಪಾಯಿ 01 ಪೈಸೆಯಿದೆ. ನಿನ್ನೆಗಿಂತ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ 10 ಪೈಸೆ, ಡೀಸೆಲ್ ದರ 14 ಪೈಸೆ ಏರಿಕೆಯಾಗಿದೆ.
ಕಳೆದ ಫೆಬ್ರವರಿ 23ರ ನಂತರ ಮೆಟ್ರೊಪಾಲಿಟನ್ ನಗರಗಳಲ್ಲಿ ಇಂಧನ ಬೆಲೆ ಏರಿಕೆಯಾಗಿದ್ದು ನಿನ್ನೆ ಮೇ 4ರಂದು. ಇಂದು ಎರಡನೇ ದಿನವೂ ಭಾರತೀಯ ತೈಲ ಕಂಪೆನಿಗಳು ದರವನ್ನು ಹೆಚ್ಚಿಸಿವೆ.