ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ನಿರ್ಮಾಣಕ್ಕೆ ಸರ್ಕಾರದಿಂದ ನೆರವು: ಸಚಿವ ಕೆ ಸುಧಾಕರ್​

ಬೆಂಗಳೂರು : ಖಾಸಗಿ ಆಸ್ಪತ್ರೆಗಳು 100 ರಿಂದ 150 ಐಸಿಯು ಬೆಡ್ ಮಾಡಲು ಒಪ್ಪಿದ್ದು. ಇದಕ್ಕೆ ಶೇ.60 ರಿಂದ 70 ಹಣಕಾಸಿನ‌ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ, ಇದಕ್ಕೆ ಸಿಎಂ ಸಹ ಒಪ್ಪಿಕೊಂಡಿದ್ದಾರೆ ಎಂದು ಸಚಿವ ಸುಧಾಕರ್ ಹೇಳಿರು.

ಖಾಸಗಿ ಆಸ್ಪತ್ರೆಯ ಮುಖ್ಯಸ್ಥರ ಜೊತೆ ಸಭೆಯ ಬಳಿಕ ಮಾತನಾಡಿದ ಅವರು, 100-1500 ಕೆಎಲ್ಎಂ ಸಾಮರ್ಥ್ಯ ಇರೋ ಆಕ್ಸಿಜನ್ ಜನರೇಟರ್ ಆಮದು ಮಾಡಿಕೊಳ್ಳಲು ತೀರ್ಮಾನ ಆಗಿದೆ. ಜೊತೆಗೆ ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳನ್ನು ಕೋವಿಡ್ ಕರ್ತವ್ಯ ಕ್ಕೆ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇದೇ ವೇಳೆ ಕೊರೊನಾ ವಾರಿಯರ್ಸ್ ಗೆ ರಿಸ್ಕ್ ಅಲವೆನ್ಸ್ ಕೊಡಲು ನಿರ್ಧರಿಸಲಾಗಿದೆ ಎಂದರು.

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.75 ರಷ್ಟು ಬೆಡ್ ಕೇಳಿದ್ದೇವೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಬೆಡ್ ಕೇಳಿದ್ದೇವೆ. ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳು ಬೆಡ್ ಕೊಡಲು ಒಪ್ಪಿವೆ. ಇನ್ನೂ ನಿನ್ನೆ ರಾತ್ರಿ 10 ಗಂಟೆಗೆ ಕೇಂದ್ರದಿಂದ ಸೂಚನೆ ಬಂದಿತ್ತು. ಅದರ ಪ್ರಕಾರ ಸಿಎಂ ಇಂದು ಸಾಂಕೇತಿಕ ಚಾಲನೆ ನೀಡಿದರು. ಸೆರಮ್ ಇನ್ಸ್​ಟಿಟ್ಯೂಟ್ ನಿಂದ ಒಟ್ಟು 1 ಕೋಟಿ ಲಸಿಕೆ ಕೇಳಿದ್ದೇವೆ. ಆ ಪೈಕಿ ನಿನ್ನೆ ಮೂರು ಲಕ್ಷ ಕೋವಿಶೀಲ್ಡ್ ಲಸಿಕೆ ಪೂರೈಕೆ ಮಾಡಿದ್ದಾರೆ ಎಂದು ತಿಳಿಸಿದರು.

ಮೂರನೇ ಹಾಗೂ ನಾಲ್ಕನೇ ಅಲೆ ಬಂದರೆ ಬರುತ್ತೆ ಅಂತ ತಿಳಿದು, ಆ ನಿಟ್ಟಿನಲ್ಲಿ ಎಲ್ಲಾ ಸಿದ್ಧತೆಗಳನ್ನು ಈಗಿನಿಂದಲೇ ಮಾಡಬೇಕು. ಆರೋಗ್ಯ ವ್ಯವಸ್ಥೆಯನ್ನು ಸಿದ್ಧಗೊಳಿಸಬೇಕು. ಇದಕ್ಕಾಗಿ ಪರಿಣತರನ್ನು ಒಳಗೊಂಡ ಮತ್ತೊಂದು ತಾಂತ್ರಿಕ ಸಲಹಾ ಸಮಿತಿ ರಚಿಸಲು ಸಲಹೆ ನೀಡಿದ್ದಾರೆ. ಇದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!