ನವದೆಹಲಿ: ಕೊರೊನಾ ಸೋಂಕಿನ ವಿರುದ್ಧ ರಷ್ಯಾ ತಯಾರಿಸಿರುವ ಸ್ಪುಟ್ನಿಕ್ -ವಿ ಲಸಿಕೆ ಹೊತ್ತ ವಿಮಾನ ಭಾರತಕ್ಕೆ ಆಗಮಿಸಿದ್ದು, ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದೆ.
ಕೊರೋನಾ ಸೋಂಕಿನ 2ನೇ ಅಲೆಯ ಅಬ್ಬರದಲ್ಲಿರುವಂತ ದೇಶದಲ್ಲಿ ನಿಯಂತ್ರಣಕ್ಕಾಗಿ ಕೊರೋನಾ ಲಸಿಕಾ ಅಭಿಯಾನ ಹೆಚ್ಚುಗೊಳಿಸಲಾಗಿತ್ತು. ದೇಶೀಯ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಜೊತೆಗೆ, ವಿದೇಶದಿಂದಲೂ ಲಸಿಕೆ ಆಮದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.
ದೇಶದಲ್ಲಿ ಮೂರನೇ ಹಂತದ ಲಸಿಕೆ ನೀಡಿಕೆಯಲ್ಲಿ ಸ್ಪುಟ್ನಿಕ್-ವಿ ಲಸಿಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿಯಿದೆ. ಇದೀಗ ರಷ್ಯಾದಿಂದ ಮೊದಲ ಬ್ಯಾಚ್ ನ 1.5 ಲಕ್ಷ ಡೋಸ್ ಲಸಿಕೆ ಆಗಮಿಸಿದ್ದು ಉಳಿದ 3 ಲಕ್ಷ ಮಿಲಿಯನ್ ಡೋಸ್ ಗಳು ಈ ತಿಂಗಳಾಂತ್ಯಕ್ಕೆ ಆಗಮಿಸಲಿದೆ.
ಡ್ರಗ್ ಕಂಟೋಲರ್ ಜನರಲ್ ಆಫ್ ಇಂಡಿಯಾ ದೇಶದಲ್ಲಿ ಕೊರೊನಾ ಸೋಂಕಿಗೆ ಸ್ಪುಟ್ನಿಕ್-ವಿ ಲಸಿಕೆ ಬಳಸಲು ಅನುಮತಿ ನೀಡಿದ್ದು, ಸ್ಪುಟ್ನಿಕ್-ವಿ ಲಸಿಕೆ ಅನುಮೋದಿಸಿರುವ 60ನೇ ದೇಶ ಭಾರತವಾಗಿದೆ.