ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ಈಗ 3 ವರ್ಷದ ಮಗುವಿಗೂ ಅರ್ಧ ಟಿಕೆಟ್

ಈ ಹಿಂದೆ ಬಸ್ ಗಳಲ್ಲಿ 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರಯಾಣದ ವ್ಯವಸ್ಥೆಯಿತ್ತು. 6-12 ವರ್ಷದೊಳಗಿನ ಮಕ್ಕಳಿಗೆ ಅರ್ಧ ಟಿಕೆಟ್ ನೀಡಲಾಗುತ್ತಿತ್ತು.

Karnataka set to resume Inter-state bus services to Kerala – COVID-19 rules  for travelling in KSRTC buses | India News

ಈಗ ವಯಸ್ಸನ್ನು ಆಧರಿಸಿ ಟಿಕೆಟ್ ಪಡೆಯುತ್ತಿಲ್ಲ. ಬದಲಿಗೆ ಮಗುವಿನ ಎತ್ತರ ಆಧರಿಸಿ ಟಿಕೆಟ್ ನೀಡಲಾಗುತ್ತದೆ. ಮಗು ಮೂರು ಅಡಿ ಎತ್ತರವಿದ್ದು, ವಯಸ್ಸು ಇನ್ನೂ ಎರಡು ಅಥವಾ ಮೂರು ವರ್ಷವೇ ಆಗಿರಲಿ.

ಅಂತಹ ಪೋಷಕ ಪ್ರಯಾಣಿಕರಿಂದ ಅರ್ಧ ಟಿಕೆಟ್ ಹಣ ಪಡೆದು ಟಿಕೆಟ್ ಕೊಡಲಾಗುತ್ತಿದೆ. ಇಂಥದೊಂದು ವ್ಯವಸ್ಥೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಯಲ್ಲಿ ಜಾರಿಗೆ ಬಂದಿದೆ. ಇದನ್ನೂ ಓದಿ : – ರಮ್ಯಾ ಪಕ್ಷ ಬಿಟ್ಟು ಹೋಗಿಲ್ಲ, ಯಾವಾಗ ಬೇಕಾದ್ರೂ ಸಂಘಟನೆಗೆ ಬರಬಹುದು – ಎಂಎಲ್ಸಿ ರಾಜೇಂದ್ರ

KSRTC to buy new technology to prevent accidents

ಮಕ್ಕಳ ಎತ್ತರ ನೋಡಲು ಬಸ್ ನ ಮಧ್ಯದಲ್ಲಿರುವ ಸರಳುಗಳ ಮೇಲೆ ಎರಡು ಕಡೆ (3 ಅಡಿ, 4 ಅಡಿ) ಬಣ್ಣದಲ್ಲಿ ಗುರುತು ಮಾಡಲಾಗಿದೆ. ಯಾರು ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸುತ್ತಾರೋ ಅಂತಹವರ ಮಕ್ಕಳನ್ನು ಸರಳಿಗೆ ನಿಲ್ಲಿಸಿ, ಎತ್ತರ ನೋಡಿ ಟಿಕೆಟ್ ನೀಡಲಾಗುತ್ತಿದೆ.

ಇದನ್ನೂ ಓದಿ : – 7 ವರ್ಷಗಳಿಂದ ಯುವತಿ ಹಿಂದೆ ನಾಗೇಶ್ ಬಿದ್ದಿದ್ದ – ನಾಗನ ರೋಚಕ ಕಹಾನಿ ಬಿಚ್ಚಿಟ್ಟ ಕಮಲ್ ಪಂತ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!