ಪಿಎಸ್ ಐ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ನಾನಿದ್ದರೂ ನನ್ನನ್ನು ಬಂಧಿಸಲಿ. ಇವರು ಎಷ್ಟೇ ನೋಟಿಸ್ ಕೊಟ್ಟರು ನನ್ನ ಬಾಯಿ ಮುಚ್ಚಿಸಲು ಆಗೋದಿಲ್ಲ. ಪಿಎಸ್ ಐ ಅಕ್ರಮದಲ್ಲಿ ಈಗ ಬಂಧನ ಆಗಿರೋರು ಕಿಂಗ್ ಪಿನ್ ಗಳಲ್ಲ.ಇವರು ಮಧ್ಯವರ್ತಿಗಳು ಮಾತ್ರ, ಕಿಂಗ್ ಪಿನ್ ಗಳು ಬೆಂಗಳೂರಿನಲ್ಲಿದ್ದಾರೆ.
ಅವರನ್ನು ಹಿಡಿಯುವ ಕೆಲಸ ಯಾಕೆ ಮಾಡುತ್ತಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ (PRIYANK KHARGE ) ಪ್ರಶ್ನಿಸಿದ್ದಾರೆ. ಸಿಐಡಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಈವರೆಗೂ ಬಂಧನ ಆಗಿರೋರ ಪಾತ್ರ ಅಕ್ರಮದಲ್ಲಿ ಏನಿದೆ.ಪರೀಕ್ಷೆ ಅಕ್ರಮದಲ್ಲಿ ಬಂಧಿತರಾದವರ ಪಾತ್ರ ಯಾಕೆ ಬಹಿರಂಗ ಪಡಿಸುತ್ತಿಲ್ಲ. ಸರ್ಕಾರಕ್ಕೆ ಶಾಸಕ ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ. .ಕಲಬುರಗಿಯಲ್ಲಿ ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣದ ಕುರಿತು.
ಮೇ ೦೫ ರಂದು ಗೃಹ ಸಚಿವರಿಗೆ ಪತ್ರ ಬರೆದು ಪ್ರಭು ಚೌವ್ಹಾಣ ಶಶೀಲ್ ನಮೋಶಿ ಸೇರಿ ಇತರರಿಗೂ ವಿಚಾರಣೆ ಕರೆಯಲು ಹೇಳಿದೆ.ಮಾಚ್೯ ೧೦. ರಂದು ರವಿಕುಮಾರ್ ಅವರು ಪಿಎಸ್ ಐ ಅಕ್ರಮದ ಬಗ್ಗೆ ಪ್ರಶ್ನೆ ಮಾಡಿದ್ದರು.ಆಗ ಐದು ಅಭ್ಯರ್ಥಿಗಳ ದೂರಿನ ಹಿನ್ನೆಲೆ ಉನ್ನತ ಮಟ್ಟದ ತನಿಖೆ ನಡೆಸಿದ್ದಾಗ ಭ್ರಷ್ಟಾಚಾರ ನಡೆದಿಲ್ಲ ಅಂತಾ ಉತ್ತರ ಕೊಟ್ಟಿದ್ದಿರಾ.ಅದಾದ ಬಳಿಕ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಅಂತಾ ಹೇಳಿದ್ರಿ. ಇದನ್ನೂ ಓದಿ : – ದಾವೋಸ್ ಪ್ರವಾಸಕ್ಕೆ ತೆರಳುವ ವಿಚಾರ ಇಂದು ತೀರ್ಮಾನ ಮಾಡ್ತೀವಿ – ಸಿಎಂ ಬೊಮ್ಮಾಯಿ
ಹಾಗಾದ್ರೆ ಐದು ಜನರ ದೂರಿನ ತನಿಖೆಯನ್ನು ಯಾವ ಅಧಿಕಾರಿಗಳ ಮಾಡಿದ್ರು.ಉನ್ನತ ಅಧಿಕಾರಿಗಳು ಮಾಡಿದ ತನಿಖಾ ವರದಿ ಏಲ್ಲಿದೆ? ಯಾಕೆ ಸಿಐಡಿ ಅವರಿಗೆ ರಿಪೋಟ್೯ ನೀಡಿಲ್ಲ.ಪ್ರಕರಣ ಸಂಬಂಧ ತಪ್ಪು ವರದಿ ನೀಡಿದ ಆ ಹಿರಿಯ ಅಧಿಕಾರಿಗಳಿಗೆ ಸರ್ಕಾರ ಏನು ಶಿಕ್ಷೆ ಕೊಟ್ಟಿದೆ ?.ಪಿಎಸ್ ಐ ಅಕ್ರಮದಲ್ಲಿ ಬಂಧಿತರ ಕೆಲವು ಹೆಸರುಗಳ ಮಾತ್ರ ಬಹಿರಂಗ ಪಡಿಸಲಾಗಿದೆ.ಇಲ್ಲಿಯವರೆಗೆ ಏಷ್ಟು ಜನ ತಲೆ ಮರೆಸಿಕೊಂಡಿದ್ದಾರೆ? ಯಾಕೆ ಸಿಐಡಿ ಅವರಿಗೆ ಎರಡನೇ ನೋಟಿಸ್ ನೀಡಿಲ್ಲ.
ಯಾವ ಅಧಿಕಾರಿಗಳ ಪಾತ್ರ ಏನು ಎಂಬುದು ಸ್ಪಷ್ಟಪಡಿಸುತ್ತಿಲ್ಲ.ಸರ್ಕಾರ ರಕ್ಷಣೆಗೆ ಮಾತ್ರ ತನಿಖೆ ಸಿಮೀತವಾಗುತ್ತಿದೆ.ಈ ಹಿಂದೆ ಪರೀಕ್ಷೆಯ ಸಮಯದಲ್ಲಿ ವೆಬ್ ಸೈಟ್ ನಲ್ಲಿ ಅಭ್ಯರ್ಥಿಗಳ ಮಾಹಿತಿ ಹಾಕಲಾಗುತ್ತಿತ್ತು .ಅಭ್ಯರ್ಥಿಗಳ ಉತ್ತರ ಸೇರಿದಂತೆ ಇತರೆ ಮಾಹಿತಿ ಇರುತ್ತಿತ್ತು. ದಿವ್ಯಾ ಅವರಲ್ಲ ಮಧ್ಯವರ್ತಿಗಳು. ನಿಜವಾದ ಕಿಂಗ್ ಪಿನ್ ಇನ್ನು ಬಂಧನವಾಗಿಲ್ಲ. ದಿವ್ಯಾ ಹಾಗರಗಿ ಆ್ಯಂಡ್ ಬಂಧಿತರು ಕಿಂಗ್ ಪಿನ್ ಅಲ್ಲ.ನಿಜವಾದ ಕಿಂಗ್ ಪಿನ್ ಗಳು ಬೆಂಗಳೂರಿನಲ್ಲಿದ್ದಾರೆ.ಅವರ ಬಂಧನ ಆಗಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ : – 7 ವರ್ಷಗಳಿಂದ ಯುವತಿ ಹಿಂದೆ ನಾಗೇಶ್ ಬಿದ್ದಿದ್ದ – ನಾಗನ ರೋಚಕ ಕಹಾನಿ ಬಿಚ್ಚಿಟ್ಟ ಕಮಲ್ ಪಂತ್