ಜಮ್ಮು ಮತ್ತು ಕಾಶ್ಮೀರದಲ್ಲಿ (Jammu kashmir) ಹಿಂದೂ ಪಂಡಿತರನ್ನು (Hindhu pandith)ಗುರಿಯಾಗಿಟ್ಟುಕೊಂಡು ಹತ್ಯೆ ಮಾಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಕಾಶ್ಮೀರಿ ಪಂಡಿತ್ ಸಮುದಾಯದಿಂದ ಬಂದ 177 ಶಿಕ್ಷಕರನ್ನು ಕಣಿವೆಯಿಂದ ಹೊರಗೆ ವರ್ಗಾಯಿಸಲಾಗಿದೆ. ಎಲ್ಲರಿಗೂ ಕಾಶ್ಮೀರದ ಜಿಲ್ಲಾ ಕೇಂದ್ರದಲ್ಲಿ ಪೋಸ್ಟಿಂಗ್ ನೀಡಲಾಗಿದೆ. ಗೃಹ ಸಚಿವಾಲಯದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮುಖ್ಯ ಶಿಕ್ಷಣಾಧಿಕಾರಿ ಹೊರಡಿಸಿರುವ ಪತ್ರದಲ್ಲಿ ಎಲ್ಲ ಶಿಕ್ಷಕರ ವರ್ಗಾವಣೆ ಕುರಿತು ಮಾಹಿತಿ ನೀಡಲಾಗಿದೆ. ಕೇಂದ್ರ ಸರಕಾರದ ಈ ನಿರ್ಧಾರವು ಕಾಶ್ಮೀರಿ ಪಂಡಿತರ ಕೋಪವನ್ನು ತಣಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ಕಣಿವೆಯಲ್ಲಿ ನಡೆಯುತ್ತಿರುವ ನಿರಂತರ ಹತ್ಯೆಗಳಿಂದ ಕಾಶ್ಮೀರಿ ಪಂಡಿತರಲ್ಲಿ ಅಸಮಾಧಾನವಿದೆ.ಮೇ 31 ರಂದು ಸಾಂಬಾದಲ್ಲಿ ಕಾಶ್ಮೀರಿ ಪಂಡಿತ್ ಶಿಕ್ಷಕ ರಜನಿ ಬಾಲಾ ಅವರ ಹತ್ಯೆಯ ನಂತರ ಪ್ರತಿಭಟನೆ ನಡೆಸುತ್ತಿತ್ತು. ಕಾಶ್ಮೀರಿ ಪಂಡಿತರನ್ನು ಜಮ್ಮುವಿಗೆ ವರ್ಗಾಯಿಸಬೇಕು, ಇದರಿಂದ ಸರಣಿ ಹತ್ಯೆಗಳನ್ನು ತಡೆಯಬಹುದು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು. ಇದನ್ನೂ ಓದಿ : – ಶಿಕ್ಷಣ ಸಚಿವರ ಮನೆ ಮೇಲಿನ ದಾಳಿ ಪ್ರಕರಣ – ಬಂಧಿತರನ್ನ ಭೇಟಿ ಮಾಡಲಿರೋ ಡಿಕೆಶಿ