ಚಾಮರಾಜನಗರ: ಗ್ರಾಮೀಣ ಭಾಗಗಳಲ್ಲಿ ಮಾಹಾಮಾರಿ ಕೊರೊನಾ ರಣಕೇಕೆ ಹಾಕುತ್ತಿದ್ದು, ಕೊರೊನಾ ಸೋಂಕನ್ನು ಕಡಿಮೆ ಮಾಡಲು ಗ್ರಾಮ ಪಂಚಾಯತ್ನಿಂದ ಮನೆ ಮನೆಗೆ ಔಷಧಿ ಸಿಂಪಡಣೆ ಮಾಡಲಾಯಿತು.
ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮ ಪಂಚಾಯತ್ದಿಂದ ಆಟೋದಲ್ಲಿ ಮೈಕ್ ಮೂಲಕ ಗ್ರಾಮದಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದರು. ಇನ್ನು ಗ್ರಾಮ ಪಂಚಾಯತ್ ವತಿಯಿಂದ ಆಶಾ ಕಾರ್ಯಕರ್ತರಿಗೆ N 95 ಮಾಸ್ಕ್, ಹ್ಯಾಂಡ್ ಗ್ಲೌಸ್, ಫೇಸ್ ಸೀಲ್ಡ್ ಹಾಗೂ ರಕ್ಷಾ ಕವಚಗಳನ್ನು ವಿತರಸಿದರು. ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆ ಹಾಜರಿದ್ದರು.
ಇನ್ನು ಬಿಸಲವಾಡಿ ಗ್ರಾಮ ಪಂಚಾಯತ್ ಸೇರಿರುವ ಕೋಡಿಉಗನೆ, ಬಂದಿಗೌಡನಹಳ್ಳಿ, ಬೀಜಿಕಾಲೋನಿ ಮತ್ತು ಬೇವಿನತಾಳ ಪುರದಲ್ಲಿ ಕೊರೊನಾ ಜಾಗೃತಿ ಮಾಡಿ ಎಲ್ಲರು ಮನೆಯಲ್ಲಿಯೇ ಇರಿ, ಅನಾವಶ್ಯಕವಾಗಿ ಯಾರು ಹೋರಗೆ ಬರಬಾರದು, ಪಂಚಾಯತಿ ವ್ಯಾಪ್ತಿಯಲ್ಲಿ ಯಲ್ಲಿ 100ಕ್ಕೂ ಹಚ್ಚು ಕೇಸುಗಳಿವೆ. ಆದ್ದರಿಂದ ಎಲ್ಲರೂ ಕೊರೊನಾ ಮಾರ್ಗಸೂಚಿ ಪಾಲಿಸಿ ಮಹಾಮಾರಿ ವೈರಸ್ ನ್ನು ತೊಲಗಿಸೋಣ ಎಂದು ಮೈಕ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದರು.