ಪ್ರತಿ ಬಾರಿ ಒಂದೇ ರೀತಿಯ ಫಿಶ್ ಫ್ರೈ ಮಾಡಿ ಬೇಜಾರಾಗಿರುತ್ತೆ. ಹೀಗಾಗಿ ಈ ಬಾರಿ ಅತ್ಯಂತ ಕ್ರಿಪ್ಸಿ ಹಾಗೂ ರುಚಿಕರವಾದ ರೀತಿಯಲ್ಲಿ ಫ್ರೈ ಮಾಡಿ. ತಮಿಳುನಾಡಿನ ಚೆಟ್ಟಿ ನಾಡ್ ಪ್ರದೇಶದ ಫಿಶ್ ಫ್ರೈ ಫುಲ್ ಫೇಮಸ್. ಅದೇ ರೀತಿಯಲ್ಲಿ ನಿಮ್ಮ ಮನೆಯಲ್ಲಿಯೇ ಫಿಶ್ ಫ್ರೈ ಮಾಡುವ ಸುಲಭವಾದ ರೆಸಿಪಿಯನ್ನ ಇಲ್ಲಿ ನೋಡೋಣ…
ಬೇಕಾಗುವ ಸಾಮಗ್ರಿಗಳು
ಸುರ್ಮೈ ಫಿಲೆಟ್ಗಳು (ರಾಜ ಮೀನು) – 4
ಎಣ್ಣೆ – 2 ಚಮಚ
ಬೆಳ್ಳುಳ್ಳಿ – 7 ರಿಂದ 8
ಲವಂಗ – 1
ಶುಂಠಿ – ಸ್ವಲ್ಪ
ಜೀರಿಗೆ – 1 ಟೀಸ್ಪೂನ್
ಕೊತ್ತಂಬರಿ ಬೀಜ – 2 ಟೀಸ್ಪೂನ್
ಕರಿಮೆಣಸು – 2 ಟೀ ಸ್ಪೂನ್
ಸಾಸಿವೆ – 1/2 ಟೀಸ್ಪೂನ್
ಕರಿಬೇವಿನ ಎಲೆಗಳು – 9-10
ಕತ್ತರಿಸಿದ ಟೊಮೆಟೊ – 1/2 ಕಪ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಕಾರ್ನ್ಫ್ಲೋರ್ – 1 ಕಪ್
ಅರಿಶಿನ ಪುಡಿ – 2 ಟೀಸ್ಪೂನ್
ಹುಣಸೆ ನೀರು – 5 ಕಪ್
ನಿಂಬೆ ತುಂಡುಗಳು, ರುಚಿಗೆ ಬೇಕಾದಷ್ಟು ಉಪ್ಪು ಇದನ್ನೂ ಓದಿ :- ಮೊಟ್ಟೆ ಬಳಸಿ ವಿಶೇಷವಾಗಿ ಮಾಡಿ ಬ್ರೆಡ್ ಟೋಸ್ಟ್
ಮಾಡುವ ವಿಧಾನ
ಮೀನಿನ ತುಂಡುಗಳನ್ನು ಸಮಾನ ತುಂಡುಗಳಾಗಿ ಕತ್ತರಿಸಿ. ಬಾಣಲೆಯಲ್ಲಿ ಒಣ ಹುರಿದ ಬೆಳ್ಳುಳ್ಳಿ, ಶುಂಠಿ, ಜೀರಿಗೆ, ಫೆನ್ನೆಲ್, ಕೊತ್ತಂಬರಿ ಬೀಜ, ಕರಿಮೆಣಸು, ಸಾಸಿವೆ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಿ. ಫ್ರೈ ಮಾಡಿದ ಮಿಶ್ರಣಕ್ಕೆ ಕತ್ತರಿಸಿದ ಟೊಮೆಟೊ, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಹುಣಸೆ ನೀರನ್ನು ಸೇರಿಸಿ ಮಸಾಲೆ ರೆಡಿ ಮಾಡಿ. ಮೀನಿನ ಮೇಲೆ ಸ್ವಲ್ಪ ಕಾರ್ನ್ಫ್ಲೋ ರ್ ಸಿಂಪಡಿಸಿ. ಮೀನುಗಳ ತುಂಡುಗಳನ್ನು ಮಸಾಲೆಯೊಂದಿಗೆ ಚೆನ್ನಾಗಿ ಡಿಪ್ ಮಾಡಿ ಎಣ್ಣೆಯಲ್ಲಿ ಫ್ರೈ ಮಾಡಿ. 15-20 ನಿಮಿಷಗಳ ಕಾಲ ತಣ್ಣಗಾಗಲು ಬಿಟ್ಟು, ಅದಕ್ಕೆ ನಿಂಬೆ ರಸವನ್ನು ಸೇರಿಸಿದರೆ ತಮಿಳುನಾಡಿನ ಚೆಟ್ಟಿ ನಾಡ್ ಪ್ರದೇಶದ ಫಿಶ್ ಫ್ರೈ ಸವಿಯಲು ಸಿದ್ದವಾಗುತ್ತದೆ.
ಇದನ್ನೂ ಓದಿ :- ಮಕ್ಕಳು ಮನೆಯಲ್ಲಿ ಮಾಡಿದ ದೋಸೆ ತಿನ್ತಿಲ್ವಾ..? ಹಾಗಿದ್ರೆ ಮೊಟ್ಟೆ ದೋಸೆ ಒಮ್ಮೆ ಟ್ರೈ ಮಾಡಿ