ಪತ್ನಿ ಸುಸೇನ್ ಖಾನ್ ರಿಂದ ದೂರವಾದ ಬಳಿಕ ಹೃತಿಕ್ ರೋಶನ್ (Hrithik Roshan) ಹೊಸ ಗೆಳತಿಯೊಂದಿಗೆ ಸುತ್ತುತ್ತಿದ್ದಾರೆ. ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದ್ದ ಮಾತುಗಳಿಗೆ ಸ್ವತಃ ಬಾಲಿವುಡ್ ಸ್ಟೈಲಿಶ್ ಹೀರೋ ಹೃತಿಕ್ ರೋಶನ್ ಅಧಿಕೃತ ಮುದ್ರೆ ಒತ್ತಿದ್ದಾರೆ.
![](https://rajnewskannada.in/wp-content/uploads/2022/05/WhatsApp-Image-2022-05-26-at-1.59.30-PM-1024x680.jpeg)
ಬಾಲಿವುಡ್ ನ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಬರ್ತ್ ಡೇ ಪಾರ್ಟಿಯಲ್ಲಿ ಹೃತಿಕ್ ರೋಶನ್ ತಮ್ಮ ಹೊಸ ಗೆಳತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ : – ಅಮ್ಮನಿಗೆ ಭಾವುಕವಾಗಿ ಹುಟ್ಟುಹಬ್ಬದ ಶುಭ ಕೋರಿದ ಐಶ್ವರ್ಯಾ ರೈ
![](https://rajnewskannada.in/wp-content/uploads/2022/05/WhatsApp-Image-2022-05-26-at-1.58.49-PM-1024x576.jpeg)
ಹೃತಿಕ್ ಮತ್ತು ಗೆಳತಿ ಸಬಾ ಅಜಾದ್ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.ವಿಶೇಷವೆಂದರೆ ಹೃತಿಕ್ ಮಾಜಿ ಪತ್ನಿ ಸುಸೇನ್ ಕೂಡಾ ಕರಣ್ ಜೋಹರ್ ಪಾರ್ಟಿಯಲ್ಲಿ ಭಾಗವಹಿಸಿದ್ದರು.
![](https://rajnewskannada.in/wp-content/uploads/2022/05/WhatsApp-Image-2022-05-26-at-2.01.28-PM.jpeg)
ಅವರು ತಮ್ಮ ಹೊಸ ಗೆಳೆಯ ಅರ್ಸ್ಲಾನ್ ಗೋನಿ ಜೊತೆ ಪಾರ್ಟಿಗೆ ಹಾಜರಾಗಿದ್ದರು. ಕರಣ್ ಹುಟ್ಟುಹಬ್ಬದ ಸಮಾರಂಭದಲ್ಲಿ ಸಬಾ ಆಜಾದ್ ಅವರನ್ನು ಹೃತಿಕ್ ತನ್ನ ಗೆಳತಿ ಎಂದು ಪರಿಚಯಿಸಿದರು. ಪಾರ್ಟಿಯಲ್ಲಿ ಸಬಾ ಮತ್ತು ಹೃತಿಕ್ ಮಾಜಿ ಪತ್ನಿ ಸುಸೇನ್ ಪರಸ್ಪರ ಮಾತನಾಡಿಕೊಂಡಿದ್ದಾರೆ.
ಇದನ್ನೂ ಓದಿ : – ಥಿಯೇಟರ್ ನಲ್ಲಿ ಮಕಾಡೆ ಮಲಗಿದ ಧಾಕಡ್ ಚಿತ್ರ – ನಟಿ ಕಂಗನಾ ರಣಾವತ್ ಗೆ ಮುಖಭಂಗ.!