ಪಕ್ಷದ ಅಧ್ಯಕ್ಷರಾಗಿ, ಪಕ್ಷದ ಏಜೆಂಟ್ ಆಗಿ ಇದ್ದೆ ಎಂದು ಡಿ ಕೆ ಶಿವಕುಮಾರ್ (DK.Shivkumar) ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಗೌಪ್ಯ ಮಾತದಾನದ ಬಗ್ಗೆ ಮಾತನಾಡುವ ಹಕ್ಕಿಲ್ಲ.
ನಮ್ಮ ಪಕ್ಷದ 69 ಜನಕ್ಕೆ ಮತ ಹಾಕಿರೋದನ್ನ ನೋಡಿದ್ದೇನೆ. ನಮ್ಮ ಶಾಸಕರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. 69 ಶಾಸಕರು ಮತ ಹಾಕಿದ್ದಾರೆ. ಜೆಡಿಎಸ್ ನ (JDS) ಶಾಸಕರು ಕಾಂಗ್ರೆಸ್ ಗೆ ಮತಹಾಕಿರುವ ವಿಚಾರಕ್ಕೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಗೊತ್ತಿಲ್ಲ, ನಾನು ನೋಡ್ದೆ ಹೇಗೆ ಹೇಳಲಿ. ಶ್ರೀನಿವಾಸ್ ಗೌಡರು (Srinivas gowda) ನನ್ನ ಸ್ನೇಹಿತರು, ಅದು ಬೇರೆ ವಿಚಾರ ನಿನ್ನೆ ನಮ್ಮ ಮನೆಗೂ ಬಂದು ಭೇಟಿ ಮಾಡಿ ಹೋಗಿದ್ದಾರೆ. ಕಾಂಗ್ರೆಸ್ (Congress) ನಮ್ಮ ಶಾಸಕರನ್ನ ಹೈಜಾಕ್ ಮಾಡಿದ್ದಾರೆ ಎಂಬ ಹೆಚ್ಡಿಕೆ (HD.Kumarswamy) ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿ ಹೈಜಾಕ್ ಮಾಡ್ಬೇಕಾದ್ರೆ 12 ಜನ ಇದ್ರು, ನಮಗೆ ಅವಶ್ಯಕತೆ ಇಲ್ಲ ಅವರ ಶಾಸಕರನ್ನೇ ಕೇಳಿಕೊಳ್ಳಲಿ ಎಂದು ಡಿ.ಕೆ .ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ : – ಶ್ರೀನಿವಾಸ್ ಗೌಡಗೆ ಮಾನ ಮರ್ಯಾದೆ ಇದ್ಯಾ ? – ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ