ಕೊರೊನಾ ಬಳಿಕ ಭಾರತಕ್ಕೆ ಮಂಕಿಪಾಕ್ಸ್ ಭೀತಿ…!

ಭಾರತದಲ್ಲಿ ಕೊರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆ ಈಗ ಮಂಕಿಪಾಕ್ಸ್ ( monkey pox )  ಭೀತಿ ಕಾಡುತ್ತಿದೆ. ಯಾಕೆಂದ್ರೆ ಅಮೆರಿಕ ಯುರೋಪ್ ನಲ್ಲಿ ಈಗಾಗಲೇ ಮಂಕಿಪಾಕ್ಸ್ ಕಾಣಿಸಿಕೊಂಡಿದೆ.

Explained: What is monkeypox, a smallpox-like disease from Africa that has  been reported in the UK? | Explained News,The Indian Express

  ಮಂಕಿಪಾಕ್ಸ್ ಅಪರೂಪದ ವೈರಲ್ ಸೋಂಕಾಗಿದ್ದು ರೋಗಗ್ರಸ್ಥ ಪ್ರಾಣಿಗಳಿಂದ ಮನುಷ್ಯನಿಗೆ ಹರಡುತ್ತದೆ. ಮಂಕಿ ಪಾಕ್ಸ್ ಕೆಲವೊಮ್ಮೆ  ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತದೆ.  ಇದು ಮನುಷ್ಯರಿಂದ ಮನುಷ್ಯರಿಗೆ ಸುಲಭವಾಗಿ ಹರಡುವುದಿಲ್ಲ. ಹೀಗಾಗಿ ನೋಂಕು ಸಾರ್ವಜನಿಕರಿಗೆ ಹರಡುವ ಸಾಧ್ಯತೆ ಸಾಧ್ಯತೆ ಅತ್ಯಂತ ಕಡಿಮೆ ಎಂದು ತಜ್ಞರು ಹೇಳಿದ್ದಾರೆ.

ಮಂಕಿಪಾಕ್ಸ್ ವೈರಸ್‌ನಿಂದ ಹರಡುವ ಕಾಯಿಲೆಯಾಗಿದೆ. ಇದು ಅರ್ಥೋಪಾಕ್ಸ್ ವೈರಸ್ ಕುಲಕ್ಕೆ ಸೇರಿದ್ದು. ಇದರಲ್ಲಿ ವರಿಯೊಲಾ ವೈರಸ್, ವ್ಯಾಕ್ಸಿನಿಯಾ ವೈರಸ್ ಮತ್ತು ಕೌಪಾಕ್ಸ್ ಸೇರಿವೆ, ಮಂಕಿಪಾಕ್ಸ್ ಒಂದು ಝೂನೋಸಿಸ್ ಆಗಿದೆ, ಇದು ಸೋಂಕಿತ ಪ್ರಾಣಿಯಿಂದ ಮನುಷ್ಯರಿಗೆ ಹರಡುವ ರೋಗ ಎಂದು ಹೇಳಬಹುದು.

ಮಂಕಿಪಾಕ್ಸ್ ಲಕ್ಷಣಗಳು

ಜ್ವರ, ತಲೆನೋವು, ಸ್ನಾಯು ಸೆಳೆತ, ಬೆನ್ನುನೋವು, ನಡುಕ, ಬಳಲಿಕೆ ಮೊದಲಾದವು ಈ ಕಾಯಿಲೆಯ ಸಾಮಾನ್ಯ ಲಕ್ಷಣಗಳಾಗಿವೆ. ಕಣ್ಣು, ಮೂಗು, ಬಾಯಿಯ ಮೂಲಕ ವೈರಾಣು ರೋಗಿಯ ನಿಕಟ ಸಂಪರ್ಕದಲ್ಲಿರುವವರಿಗೆ ಹರಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರೋಗಿಯೊಂದಿಗೆ ಸಂಪರ್ಕದಲ್ಲಿರುವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ

Rare Monkeypox Cases Reported from US, First Time In Nearly 20 Years |  TheHealthSite.com

ಮಂಕಿಪಾಕ್ ವೈರಸ್ ಹರಡುವುದು ಹೇಗೆ?

ಮಂಕಿ ಪಾಕ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತೆ, ಈ ಮೊದಲು ಈ ಸೋಂಕಿಗೆ ಒಳಗಾಗಿದ್ದ ವ್ಯಕ್ತಿಯ ಸಂಪರ್ಕಕ್ಕೆ ಬಂದಾಗ ಸೋಂಕು ತಗುಲುತ್ತದೆ. ಈ ಸೋಂಕು ಕಣ್ಣು, ಮೂಗು, ಬಾಯಿ, ಬಿರುಕುಬಿಟ್ಟ ಚರ್ಮದ ಮೂಲಕವೂ ದೇಹವನ್ನು ಪ್ರವೇಶಿಸುತ್ತೆ.

ಮಂಕಿಪಾಕ್ಸ್ ಶುರುವಾದ ಆರಂಭದಲ್ಲಿ ಸೀತ, ಜ್ವರ, ಆಯಾಸ, ಸ್ನಾಯು ಸೆಳೆತ ಬೆನ್ನುಹುರಿ ನೋವು, ಅಯಾಸ ಉಂಟಾಗಬಹುದು. ಇದು ಸಿಡುಬಿನಂತೆಯೇ ಕಂಡರೂ ಅಷ್ಟು ಗಂಭೀರ ಕಾಯಿಲೆಯಾಗಿರುವುದಿಲ್ಲ. 

ಮಂಕಿ ಪಾಕ್ಸ್ ರೋಗದಲ್ಲಿ ಸುಮಾರು 3 ರಿಂದ 4 ದಿನಗಳವರೆಗೆ ಜ್ವರ ಇರಲಿದ್ದು, ದೇಹದಲ್ಲಿ ರಾಶಸ್ ಕಾಣಿಸಿಕೊಳ್ಳಬಹುದು. ರೋಗವು ಸಾಮಾನ್ಯವಾಗಿ 2 ರಿಂದ 4 ವಾರಗಳವರೆಗೆ ಇರುತ್ತದೆ. ಚರ್ಮದ ಮೇಲಿರುವ ದದ್ದುಗಳು 2 ರಿಂದ 4 ವಾರಗಳವರೆಗೆ ಇರುತ್ತದೆ.

ಮುಂಜಾಗ್ರತಾ ಕ್ರಮಗಳು

ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಗಳಿಂದ ದೂರವಿರಬೇಕು ವೈರಸ್ ಹರಡುವ ಪ್ರಾಣಿಗಳೊಂದಿಗೆ ಸಂಪರ್ಕ ಬೇಡ. ಆಗಾಗ ಕೈಗಳನ್ನು ತೊಳೆದು ಸ್ವಚ್ಛವಾಗಿಟ್ಟುಕೊಳ್ಳಿ, ಸೋಂಕಿತ ರೋಗಿಗಳಿಂದ ದೂರವಿರಿ. ಮಂಕಿಪಾಕ್ಸ್ ರೋಗಕ್ಕೆ ಚಿಕಿತ್ಸೆ ಲಭ್ಯವಿಲ್ಲ. ಆದರೆ ಈ ರೋಗವನ್ನು ತಡೆಗಟ್ಟಲು ಸ್ಮಾಲ್ ಪಾಕ್ಸ್ ಲಸಿಕೆ, ಆಂಟಿವೈರಲ್ ಮತ್ತು ವಿಐಜಿಗಳನ್ನು ಬಳಸಬಹುದು. ಮಂಕಿಪಾಕ್ಸ್ ಅನ್ನು ತಡೆಗಟ್ಟುವಲ್ಲಿ ಸಿಡುಬು ಲಸಿಕೆ ಶೇ.85ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿದೆ.  ಭಾರತ ಭಯಪಡುವ ಅಗತ್ಯವಿಲ್ಲ ಭಾರತದಲ್ಲಿ ಇದುವರೆಗೂ ಒಂದೇ ಒಂದು ಪ್ರಕರಣಗಳು ಪತ್ತೆಯಾಗಿಲ್ಲ. ಯುರೋಪ್ ಅಮೆರಿಕದಲ್ಲಿ ಈಗ ಮಂಕಿಪಾಕ್ಸ್ ಕಾಣಿಸಿಕೊಂಡಿದ್ದು ಆತಂಕ ಸೃಷ್ಟಿಸಿದೆ. ಇದನ್ನೂ ಓದಿ : – ಶೀನಾ ಬೋರಾ ಹತ್ಯೆ ಪ್ರಕರಣ – ಇಂದ್ರಾಣಿ ಮುಖರ್ಜಿಗೆ ಬಿಡುಗಡೆ ಭಾಗ್ಯ 

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!