ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,68,912 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, 905 ಮಂದಿ ಬಲಿಯಾಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ದೇಶದಲ್ಲಿ ಸತತ 5ನೇ ದಿನ ಒಂದೂವರೆ ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದು ದೇಶದಲ್ಲಿ ಕೊರೊನಾ ಕಾಲಿಟ್ಟ ನಂತರ ಪತ್ತೆಯಾದ ಅತ್ಯಧಿಕ ಪ್ರಕರಣಗಳಾಗಿವೆ.
ದೇಶದಲ್ಲಿ 75,086 ಮಂದಿ ಸೋಂಕಿನಿಂದ ಗುಣಮುಖಿತರಾಗಿದ್ದು, ಒಟ್ಟಾರೆ 1.35 ಸೋಂಕಿತರಿದ್ದು, ಸಾವಿನ ಸಂಖ್ಯೆ 1,70,179ಜಕ್ಕೆ ಜಿಗಿತ ಕಂಡಿದೆ. 10 ಕೋಟಿಗೂ ಅಧಿಕ ಮಂದಿಗೆ ಇದುವರೆಗೆ ಲಸಿಕೆ ಹಾಕಲಾಗಿದೆ.