ಅಮೆರಿಕದಲ್ಲಿ ಭಾರತೀಯರ ಕಲರವ: ಫೆಡರಲ್​ ಜಡ್ಜ್​ ಆಗಲಿದ್ದಾರೆ ಭಾರತೀಯ ಮಹಿಳೆ

ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯರ ಕಲರವ ಮುಂದುವರೆದಿದೆ. ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ನಾಸಾದಲ್ಲಿ ಭಾರತೀಯ ಮೂಲದ ಮಹಿಳೆ ಉನ್ನತ ಸ್ಥಾನಕ್ಕೇರುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಮತ್ತಷ್ಟು ಮೇಲಕ್ಕೇರಿಸಿದ್ದಾರೆ.

ಸದ್ಯ ಭಾರತೀಯ ಮೂಲದ ರೂಪಾ ಪುಟ್ಟಗುಂಟ ಅವರನ್ನು ಫೆಡರಲ್ ಜಡ್ಜ್ ಆಗಿ ನೇಮಕ ಮಾಡುವ ಇಂಗಿತವನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಪ್ರಕಟಿಸಿದ್ದಾರೆ.

ಅಮೆರಿಕದ ಫೆಡರಲ್ ಬೆಂಚ್ ಅಮೆರಿಕ ಜನತೆಯ ಸಂಪೂರ್ಣ ವೈವಿಧ್ಯತೆಯನ್ನು ಬಿಂಬಿಸಬೇಕು ಎಂಬ ಅಧ್ಯಕ್ಷ ಬದ್ಧತೆಗೆ ಅನುಗುಣವಾಗಿ ಸೂಕ್ತ ಹಾಗೂ ಅರ್ಹರನ್ನು ವೃತ್ತಿ ಅನುಭವದ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಸೆನೆಟ್​ ಒಪ್ಪಿಗೆ ನೀಡಿದ ಕೂಡಲೇ ರೂಪ ಪುಟ್ಟಗುಂಟ ಅವರು ಫೆಡರಲ್​ ಆಗಿ ನೇಮಕಗೊಳ್ಳಲಿದ್ದಾರೆ. ರೂಪವ ಪುಟ್ಟಗುಂಟ ಪ್ರಸ್ತುತ ಆಡಳಿತಾತ್ಮಕ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇತ್ತೀಚಿಗಷ್ಟೇ ಅಮೆರಿಕದ ಸರ್ಜನ್​ ಜನರಲ್​ ಆಗಿ ಕರ್ನಾಟಕ ಮೂಲದ ಡಾ.ವಿವೇಕ್​ರನ್ನು ಬೈಡನ್​ ನೇಮಿಸಿದ್ದರು. ಅಲ್ಲದೇ ಜೋ ಬೈಡನ್​ ಅವರ ಆಡಳಿತದಲ್ಲಿ ಹಲವು ಭಾರತೀಯರು ಕಾರ್ಯ ನಿರ್ವಹಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!