ನವದೆಹಲಿ: ನೆರೆಹೊರೆಯ ದೇಶಗಳು ನಮಗೆ ಶತ್ರುಗಳಲ್ಲ. ಪಾಕಿಸ್ತಾನ ಸದಾ ಸ್ನೇಹವನ್ನು ಬಯಸುತ್ತದೆ. ಭಾರತದ ಜೊತೆಗಿನ ಸ್ನೇಹ ನಮಗೆ ಮಹತ್ವದ್ದಾಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಗೆ ಶುಭಾಷಯ ಕೋರಿ ಪ್ರಧಾನಿ ನರೇಂದ್ರ ಮೋದಿ ಇಮ್ರಾನ್ ಖಾನ್ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಮರುಪತ್ರ ಬರೆದಿರುವ ಇಮ್ರಾನ್ ಖಾನ್, ಪತ್ರದಲ್ಲಿ ಸ್ನೇಹಹಸ್ತ ಚಾಚಲು ಸಿದ್ಧ ಎಂದಿದ್ದಾರೆ.
ಪಾಕಿಸ್ತಾನದ ನಾಗರಿಕರೊಡನೆ ಉತ್ತಮ ಸ್ನೇಹ ಸಂಬಂಧವನ್ನು ಭಾರತೀಯರು ಬಯಸುತ್ತಾರೆ. ಎಲ್ಲರೂ ಒಟ್ಟಾಗಿ ಭಯೋತ್ಪಾದನೆ ಮುಕ್ತ ನಂಬಿಕೆಯ ವಾತಾವರಣವನ್ನು ನಿರ್ಮಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಪತ್ರದಲ್ಲಿ ಉಲ್ಲೇಖಿಸಿದ್ದರು.
ಪಾಕಿಸ್ತಾನ ಮತ್ತು ಭಾರತದ ನಡುವಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ರಚನಾತ್ಮಕ ಮತ್ತು ಫಲಿತಾಂಶ ಆಧಾರಿತ ಸಂವಾದಕ್ಕೆ ಶಕ್ತಗೊಳಿಸುವ ವಾತಾವರಣವನ್ನು ರಚಿಸುವುದು ಕಡ್ಡಾಯವಾಗಿದೆ ಎಂದು ಇಮ್ರಾನ್ ಖಾನ್ ಪತ್ರದಲ್ಲಿ ಬರೆದಿದ್ದಾರೆ.