ಕೊರೊನಾ ವೈರಸ್ 2ನೇ ಅಲೆಯ ಅಬ್ಬರದ ಹಿನ್ನೆಲೆಯಲ್ಲಿ ಮೊಟಕುಗೊಂಡಿರುವ ಐಪಿಎಲ್ ಟಿ-20 ಟೂರ್ನಿ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 10ರವರೆಗೆ ದುಬೈನಲ್ಲಿ ನಡೆಯುವ ಸಾಧ್ಯತೆ ಇದೆ.
ಟೂರ್ನಿಯ ವೇಳೆ ಆಟಗಾರರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಮೇ 4ರ ನಂತರ ಐಪಿಎಲ್ ಪಂದ್ಯಗಳು ನಡೆಯಲಿಲ್ಲ. ಇದೀಗ ಬಿಸಿಸಿಐ ಉಳಿದ ಪಂದ್ಯಗಳನ್ನು ನಡೆಸಲು ಸಿದ್ಧತೆ ನಡೆಸಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ಮೈದಾನದಲ್ಲಿ ನಡೆಯುವ ಚಿಂತನೆ ನಡೆದಿದೆ.
ಕಳೆದ ಆವೃತ್ತಿ ಕೂಡ ಯುಎಇನಲ್ಲಿ ನಡೆದಿದ್ದು, ಸೆಪ್ಟೆಂಬರ್ 14ರಲ್ಲಿ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ಅಂತ್ಯಗೊಳ್ಳಲಿದೆ. ಇದರ ಬೆನ್ನಲ್ಲೇ ಐಪಿಎಲ್ -2021 ಮುಂದುವರಿಸುವ ಆಲೋಚನೆಯಲ್ಲಿ ಬಿಸಿಸಿಐ ಸಿದ್ಧತೆ ನಡೆಸಿದೆ.