ಗದಗ: ಪಾಳು ಬಿದ್ದಿರುವ ಬಾವಿಗೆ ಗರ್ಭಿಣಿ ಹಸುವೊಂದು ಬಿದ್ದಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವಪುತ್ರಯ್ಯ ಸರಗಣಾಚಾರಿ ಎಂಬುವರಿಗೆ ಸೇರಿದ ಆಕಳು ಬಾವಿಗೆ ಬಿದ್ದಿಗೆ. ಶಿವಪುತ್ರಯ್ಯ ಎಂಬುವವರ ಮನೆಯ ಸಮೀಪದಲ್ಲಿರುವ ಬಾವಿಗೆ ಮೇಯಲು ಹೋಗಿದ ಹಸು ಕಾಲು ಜಾರಿ ಬಾರಿಗೆ ಬಿದ್ದಿದೆ.
ಹಸು ಬಾವಿಗೆ ಬಿದ್ದಿರುವ ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಗರ್ಭಿಣಿ ಆಕಳು ರಕ್ಷಣಾ ಕಾರ್ಯಕ್ಕೆ ಇಳಿದ್ದಾರೆ. ಸ್ಥಳೀಯರು ಸಹಾಯ ದಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಸುವಿಗೆ ಯಾವುದೇ ತೊಂದರೆಯಾಗದಂತೆ ಹಗ್ಗ ಕಟ್ಟಿ ಏಣಿಯ ಸಹಾಯದಿಂದ ಮೇಲೆ ತಗೆದಿದ್ದಾರೆ.
ಇನ್ನು ಆರು ತಿಂಗಳು ಗರ್ಭಿಣಿಯಾಗಿದ ಆಕಳಿಗೆ ಬಾವಿಯಲ್ಲಿ ಬಿದ್ದ ಪರಿಣಾಮವಾಗಿ ಕಾಲುಗಳಿಗೆ ಸಣ್ಣ ಪುಟ್ಟ ಗಾಯಗಳ ಸಂಭವಿಸಿವೆ. ಇನ್ನು ಸಂರಕ್ಷಿತವಾಗಿ ಹಸು ರಕ್ಷಣೆ ಮಾಡಿದ ಅಗ್ನಿಶಾಮಕ ದಳ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.