ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಸತತ 7 ಪಂದ್ಯಗಳ ನಂತರ ಮೊದಲ ಬಾರಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್ ವಿರುದ್ಧ ಮೊದಲ ಬಾರಿ ಟಾಸ್ ಗೆದ್ದಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಯಾನ್ ಮಾರ್ಗನ್ ವಿರುದ್ಧ ಕೊಹ್ಲಿ ಸತತ 7 ಪಂದ್ಯಗಳಿಂದ ಟಾಸ್ ಸೋತಿದ್ದರು. ಅಂತಿಮವಾಗಿ ಟಾಸ್ ಗೆಲ್ಲುವ ಮೂಲಕ ಈ ಸರಪಳಿಯನ್ನು ಮುರಿದರು.
ಟಾಸ್ ಗೆದ್ದ ಕೂಡಲೇ ಸಂಭ್ರಮ ವ್ಯಕ್ತಪಡಿಸಿದ ಇಯಾನ್ ಮಾರ್ಗನ್ ವಿರುದ್ಧ ಟಾಸ್ ಗೆದ್ದಿರುವುದನ್ನು ನಂಗೆ ನಂಬೋಕೆ ಆಗ್ತಿಲ್ಲ. ಈಗ ನಾನು 7-1ರಿಂದ ಟಾಸ್ ಗೆದ್ದಂತಾಯಿತು ಎಂದು ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.