ಮೂರನೇ ತಿಂಗಳಲ್ಲಿ ಸಿಕ್ಸ್ ಪ್ಯಾಕ್ ಮಾಡಿಸ್ತೀನಿ ಅಂತ ಯುವಕನಿಗೆ ಜಿಮ್ ಟ್ರೈನರ್ ಲಕ್ಷಾಂತರ ರೂ. ವಂಚಿಸಿದ ಘಟನೆ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸಕೆರೆಹಳ್ಳಿ ನಿವಾಸಿ ಕೌಶಿಕ್ ಎಂಬಾತನಿಗೆ ಬನಶಂಕರಿಯಲ್ಲಿ ಎಂಪವರ್ ಹೆಸರಿನಲ್ಲಿ ಜಿಮ್ ನಡೆಸ್ತಿರೋ ಮೋಹನ್ 7 ಲಕ್ಷ ರೂ. ವಂಚಿಸಿದ್ದಾನೆ.
ಸಿಕ್ಸ್ ಪ್ಯಾಕ್ ಮಾಡಲು ಇಚ್ಛಿಸಿದ್ದ ಕೌಶಿಕ್ ಸಂಪರ್ಕಿಸಿದಾಗ ಸಿಕ್ಸ್ ಪ್ಯಾಕ್ ಮಾಡಿರುವ ಹುಡುಗರ ಫೋಟೊಗಳನ್ನು ತೋರಿಸಿ ಮೂರು ತಿಂಗಳಲ್ಲಿ ಸಿಕ್ಸ್ ಪ್ಯಾಕ್ ಮಾಡಿಸ್ತೀನಿ ಎಂದು ಮೊದಲೆರಡು ಕಂತುಗಳಲ್ಲಿ 2 ಲಕ್ಷ ರೂ.ವನ್ನು ಮೋಹನ್ ಪಡೆದಿದ್ದ. ಅಲ್ಲದೇ ಬ್ಯಾಂಕ್ ನಿಂದ 5 ಲಕ್ಷ ರೂ. ಹಣ ಕೊಡಿಸು ಇಎಂಐ ಕಟ್ಟುತ್ತೇನೆ ಎಂದು ನಂಬಿಸಿದ್ದಾನೆ.
ಜಿಮ್ ಟ್ರೈನರ್ ಗೆ ತನ್ನ ಅಕೌಂಟ್ ನಿಂದ ಕೌಶಿಕ್ 5 ಲಕ್ಷ ಸಾಲ ಕೊಡಿಸಿದ್ದಾನೆ. ಹಣ ಪಡೆದ ನಂತರ ಮೋಹನ್ ಸಿಕ್ಸ್ ಪ್ಯಾಕ್ ಮಾಡಿಸಲೂ, ಸಾಲದ ಕಂತು ಕಟ್ಟದೇ ಮೋಸ ಮಾಡಿದ್ದಾನೆ. ಇದನ್ನು ಪ್ರಶ್ನಿಸಲು ಹೋದರೆ ಧಮಕಿ ಹಾಕಿ ಕಳುಹಿಸಿದ್ದಾನೆ ಎಂದು ಮೋಹನ್ ಆರೋಪಿಸಿದ್ದಾರೆ.
ಕೌಶಿಕ್ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗುತ್ತಿದ್ದಂತೆ ಜಿಮ್ ಟ್ರೈನರ್ ಮೋಹನ್ ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.