ದೆಹಲಿ: ಸುಪ್ರೀಂ ಕೋರ್ಟ್ನ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಎನ್ ವಿ ರಮಣ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇಮಕ ಮಾಡಿದ್ದಾರೆ. ಏಪ್ರಿಲ್ 24 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕಳೆದ ತಿಂಗಳು ಹಾಲಿ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ ಬೊಬ್ಡೆ ತಮ್ಮ ಸ್ಥಾನಕ್ಕೆ ನ್ಯಾ.ಎನ್.ವಿ. ರಮಣ ಹೆಸರನ್ನು ಶಿಫಾರಸ್ಸು ಮಾಡಿದ್ದರು. ಈ ಶಿಫಾರಸ್ಸನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಇದೇ ಏಪ್ರಿಲ್ 23 ರಂದು ಎಸ್.ಎ.ಬೊಬ್ಡೆ ನಿವೃತ್ತರಾಗಲಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೇರುವ ಮೂಲಕ ಈ ಹುದ್ದೆ ಅಲಂಕರಿಸಿದ ಆಂಧ್ರ ಪ್ರದೇಶದ ಎರಡನೇ ವ್ಯಕ್ತಿ ಎಂಬ ಹಿರಿಮೆಗೆ ಎನ್.ವಿ. ರಮಣ ಪಾತ್ರರಾಗಿದ್ದಾರೆ. ಈ ಹಿಂದೆ ಆಂಧ್ರದ ಜಸ್ಟೀಸ್ ಕೆ. ಸುಬ್ಬ ರಾವ್ 1966 ರಿಂದ 67ನೇ ಅವಧಿಗೆ ಸಿಜೆಐ ಆಗಿದ್ದರು.