ಬೆಂಗಳೂರು: ಖ್ಯಾತ ಸಂಗೀತ ಸಂಯೋಜಕ ರವಿ ಬಸ್ರೂರು ಕನಸಿನ ಕೂಸು ಊರಲ್ಲಿ ಸಿದ್ಧವಾಗಿದೆ. ಸುತ್ತ ಹಚ್ಚಹಸಿರಿನ ನಡುವೆ ಮ್ಯೂಸಿಕ್ ಸ್ಟುಡಿಯೋವೊಂದನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಕುಂದಾಪುರದಲ್ಲಿರುವ ಸ್ಟುಡಿಯೋದಲ್ಲೇ ಕೆಜಿಎಫ್2 ಸಿನಿಮಾಗೆ ಸಂಗೀತ ಸಂಯೋಜನೆ ಕೆಲಸ ನಡೆಯುತ್ತಿದೆ.
ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ತಮ್ಮ ಊರು ಬಸ್ರೂರಿನಲ್ಲಿ ಸುಸಜ್ಜಿತ ಸ್ಟುಡಿಯೋ ನಿರ್ಮಾಣ ಮಾಡಿದ್ದಾರೆ. ಸ್ಟುಡಿಯೋಕ್ಕೆ ರವಿ ಬಸ್ರೂರು ಮ್ಯೂಸಿಕ್ ಆಂಡ್ ಮೂವೀಸ್ ಎಂದು ಹೆಸರಿಟ್ಟಿದ್ದಾರೆ.
ಕೇವಲ ರವಿ ಬಸ್ರೂರು ಸ್ಟುಡಿಯೋದಲ್ಲಿ ಮಾತ್ರವೇ ‘ಕೆಜಿಎಫ್ 2’, ‘ಸಲಾರ್’ ಸಿನಿಮಾಗಳಿಗೆ ಸಂಗೀತ ನೀಡಲಾಗುತ್ತದೆ. ಎರಡೂ ಸಿನಿಮಾದ ಹಿನ್ನೆಲೆ ಸಂಗೀತ ಕಾರ್ಯ ಚಾಲ್ತಿಯಲ್ಲಿದೆ ಎಚಿದು ರವಿ ಬಸ್ರೂರು ಜೊತೆಗೆ ನಿಂತಿರುವ ಫೋಟೋವನ್ನು ಪ್ರಶಾಂತ್ ನೀಲ್ ಹಂಚಿಕೊಂಡಿದ್ದಾರೆ.
ಜುಲೈನಲ್ಲಿ ಕೆಜಿಎಫ್2 ಸಿನಿಮಾ ರಿಲೀಸ್ ಆಗಲಿದೆ. ಯಶ್ ಫ್ಯಾನ್ಸ್ ಅಷ್ಟೇ ಅಲ್ಲ, ಎಲ್ಲಾ ಭಾಷೆಯ ಸಿನಿಪ್ರೇಮಿಗಳು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ.