ರೈತನಿಂದ 2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಕೆಐಎಡಿಬಿ ವಿಶೇಷಾಧಿಕಾರಿ ತೇಜಸ್ ಕುಮಾರ್ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಬಿ) ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರಿನ ಮಹಾರಾಣಿ ಕಾಲೇಜು ಬಳಿ ಇರುವ ಭಾರತ್ ಸ್ಕೌಟ್ಸ್ ಕಟ್ಟದಲ್ಲಿರುವ ಕಚೇರಿಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತೇಜಸ ಕುಮಾರ್ ಅವರನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.
ರೈತ ಬಾಲಕೃಷ್ಣ ನೀಡಿದ ದೂರಿನ ಮೇರೆಗೆ ಕೆಐಎಡಿಬಿ ಕಚೇರಿ ಎಸಿಬಿ ದಾಳಿ ನಡೆಸಿದ್ದು, ಚಿಂತಾಮಣಿ ತಾಲ್ಲೂಕಿನ ಮಲ್ಕಾಪುರ ಗ್ರಾಮದ ಸರ್ವೆ 40/63ರ 27 ಗುಂಟೆ ರೈತರ ಜಮೀನನ್ನು ಕೆಐಎಡಿಬಿ ವಶಪಡಿಸಿಕೊಂಡಿದ್ದು, ಸರಕಾರದಿಂದ 28 ಲಕ್ಷ ರೂ. ಬಿಡುಗಡೆ ಮಾಡಬೇಕಾದರೆ 9 ಲಕ್ಷ ರೂ. ನೀಡುವಂತೆ ಲಂಚ ಕೇಳಿದ್ದರು.
ಸರ್ಕಾರದಿಂದ 28 ಲಕ್ಷ ಭೂ ಪರಿಹಾರ ಮಂಜೂರಾಗಿದ್ದರೂ ಹಂತ ಹಂತವಾಗಿ ರೈತರಿಂದ 10 ಲಕ್ಷ ಹಣ ಪಡೆದರೂ ಭೂ ಪರಿಹಾರ ನೀಡದೇ ತೇಜಸ್ ಸತಾಯಿಸುತ್ತಿದ್ದರು. ಇದರಿಂದ ಬೇಸತ್ತ ಬಾಲಕೃಷ್ಣ ದೂರು ನೀಡಿದ್ದರು.