ಸಾರಿಗೆ ನೌಕರರ (Transport employee) ಹೋರಾಟ ನಿಲ್ಲಿಸಲು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ( Kodihalli chandrashekar ) ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಟಿ ನಡೆಸಿದ್ರು.
ಖಾಸಗಿ ವಾಹಿನಿಯಲ್ಲಿ ನನ್ನನ್ನು ಆರೋಪಿ ಎಂದು ಬಿಂಬಿಸಲಾಗಿದೆ. ನೀವು ಸುಪ್ರಿಕೋರ್ಟ್, ಹೈಕೋರ್ಟ್ ( Highcourt ) ಚೀಫ್ ಜಸ್ಟೀಸ್ ಅಲ್ಲ. ಸರ್ಕಾರ ಈ ಬಗ್ಗೆ ತನಿಖೆ ನಡೆಸಲಿ ಸತ್ಯಾಂಶ ಹೊರಬರಲಿ ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿ ಆಫರ್ ಮಾಡಿದ್ರೆ ಅದು ಅಪರಾಧನಾ? ನಾನು ಹಣ ತಗೊಂಡ್ರೆ ಅದು ಅಪರಾಧ. ನಾನು ದುಡ್ಡು ಕೊಟ್ರೆ ಮುಷ್ಕರ ನಿಲ್ಲಿಸ್ತೀನಿ ಅಂತಾ ಹೇಳಿದೀನಿ ಅಂತಾ ಯಾರು ಹೇಳಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಿಎಂ ಬೊಮ್ಮಾಯಿ (CM.BOMMAI ) ಅವರಿಗೆ ಪತ್ರ ಬರೆದಿದ್ದೇನೆ ಎಂದು ಅವರ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ .ಕೋಡಿಹಳ್ಳಿ ಕಳ್ಳ ಎಂದು ವಾಗ್ದಾಳಿ. ಇದನ್ನೂ ಓದಿ : – ಬೇಟೆಯಾಡೋ ಹುಲಿಯನ್ನ ಬೋನ್ ನಲ್ಲಿ ಕೂಡಿ ಹಾಕಿದ್ರೂ ಅದು ತನ್ನ ಪ್ರವೃತ್ತಿ ಮರೆಯಲ್ಲ – ಅಪ್ಪನ ನಿರ್ಲಕ್ಷಿಸಿದವರಿಗೆ ವಿಜಯೇಂದ್ರ ತಿರುಗೇಟು
ಜೆಡಿಎಸ್ ( Jds ) ಕಾರ್ಯಕರ್ತರು ಕೋಡಿಹಳ್ಳಿ ಬೆಂಬಲಗ ರೈತರಿಗೆ ಮಸಿ ಬಳೆದು ಕೋಡಿ ಹಳ್ಳಿ ಕಳ್ಳ ಕಳ್ಳ ಎಂದು ಆಕ್ರೋಶ ವಕ್ತಪಡಿಸಿದರು. ಈ ಕುರಿತು ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಹೆಚ್ ಡಿ ಕೆ ಬೆಂಬಲಿಗರು ನಮ್ಮನ್ನು ಅಡ್ಡಗಟ್ಟಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಕುಮಾರಸ್ವಾಮಿಯವ್ರೇ ತಮ್ಮ ರಾಜಕೀಯ ಹತಾಶೆಯನ್ನು ಈ ಮೂಲಕ ವ್ಯಕ್ತಪಡಿಸೋದು ಸರಿಯಲ್ಲ. ನಾನು ತಪ್ಪು ಮಾಡಿದ್ರೆ ನಾನು ಕ್ಷಮೆ ಕೇಳ್ತೇನೆ, ಇಲ್ಲದಿದ್ದಲ್ಲಿ ನೀವು ಕ್ಷಮೆ ಕೇಳ್ಬೇಕು ಎಂದು ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ. ಇದನ್ನೂ ಓದಿ : – ಪ್ರಸನ್ನನಂದಾಪುರಿ ಸ್ವಾಮೀಜಿ ಆರೋಗ್ಯ ವಿಚಾರಿದ ಸಿಎಂ ಬೊಮ್ಮಾಯಿ