ಕೊಳ್ಳೇಗಾಲದ ಯುವತಿ ವಾಯುಪಡೆಯ ಮೊದಲ ಟೆಸ್ಟ್ ಇಂಜಿನಿಯರ್!

ಚಾಮರಾಜನಗರ ಕೊಳ್ಳೇಗಾಲ ತಾಲೂಕಿನ ಯುವತಿಯೊಬ್ಬಳು ಭಾರತೀಯ ನೌಕಾಪಡೆಯ ಮಹಿಳಾ ಫ್ಲೈಟ್ (ಯುದ್ಧ ವಿಮಾನ) ಟೆಸ್ಟ್ ಇಂಜಿನಿಯರ್ ಆಗಿ ನೇಮಕಗೊಂಡ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಈ ಮೂಲಕ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಮಹಿಳೆ ಇಲ್ಲದ ಕ್ಷೇತ್ರವಿಲ್ಲ ಎಂಬಂತಾಗಿದೆ. ಇದಕ್ಕೆ ಕೊಳ್ಳೆಗಾಲದ ಅಶ್ರಿತಾ ವಿ. ಭಾರತೀಯ ನೌಕಾಪಡೆಯ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ನೇಮಕಗೊಂಡಿದ್ದಾರೆ.

ವೆಂಕಟೇಶ್ವರ ಜ್ಯೂಯೆಲರ್ಸ್ ಮಾಲೀಕರಾದ ಓ.ವಿ. ವೆಂಕಟೇಶ್ ಬಾಬು ಮತ್ತು ಓ.ವಿ, ವಾಣಿ ದಂಪತಿಯ ಪುತ್ರಿಯಾದ ಅಶ್ರೀತಾ, ಪಟ್ಟಣದ ವಾಸವಿ ಶಾಲೆಯಲ್ಲಿ ಪ್ರಾಥಮಿಕ ಶಾಲೆಯನ್ನು ವಿದ್ಯಾಭ್ಯಾಸ ಆರಂಭಿಸಿದ್ದರು. ಮೈಸೂರಿನಲ್ಲಿ ಪಿಯುಸಿ ಹಾಗೂ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿದ ಅಶ್ರೀತಾ ವಾಯುಪಡೆಗೆ ಸೇರುವ ಮುನ್ನ ಖಾಸಗಿ ಕಂಪನಿಯಲ್ಲಿ ಯುಜಿಸಿ ಯೂರೆಟೆಕ್ ನಲ್ಲಿ ಕೆಲಸ ಮಾಡಿದ್ದರು.

ವಿಶ್ವದ 7 ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪೈಕಿ ಒಂದಾಗಿರುವ ಭಾರತದ ಏರ್ ಫೋರ್ಸ್ ಟೆಸ್ಟ್ ಪೈಲೆಟ್ ಸ್ಕೂಲ್ ನಲ್ಲಿ ಅಶ್ರಿತಾ ಪದವಿ ಪಡೆದಿದ್ದಾರೆ. ಇದುವರೆಗೆ 275 ಮಂದಿ ಇಲ್ಲಿ ಪದವಿ ಪಡೆದಿದ್ದು, ಅತ್ಯಂತ ಕಠಿಣ ತರಬೇತಿಯಲ್ಲಿ ಉತ್ತೀರ್ಣರಾಗಿದ್ದು, ನೌಕಾಪಡೆಯ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ನೇಮಕಗೊಂಡ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!