ಕೊರೊನಾ ಸೋಂಕಿಗೆ ಸಾಕಷ್ಟು ಮಂದಿ ಕಲಾವಿದರು ಬಲಿಯಾಗುತ್ತಿದ್ದಾರೆ. ಕನ್ನಡ, ಹಿಂದಿ ಸೇರಿದಂತೆ ಇತರೆ ಭಾಷೆಗಳಲ್ಲೂ ಸ್ಟಾರ್ಗಳು ಕೋವಿಡ್ನಿಂದ ಸಾವನ್ನಪ್ಪುತ್ತಿದ್ದಾರೆ. ಇದೀಗ ತಮಿಳು ಚಿತ್ರರಂಗದ ಖ್ಯಾತ ನಟ ನಿತೀಶ್ ವೀರಾ ಬಲಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ಅವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು. ಬಳಿಕ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
2000ರಲ್ಲಿ ತಮಿಳು ಚಿತ್ರರಂಗಕ್ಕ ಪಾದಾರ್ಪಣೆ ಮಾಡಿದ ನಿತೀಶ್ ವೀರಾ ಅವರು ರಜನಿಕಾಂತ್ ನಟನೆಯ ಕಾಲಾ, ಧನುಷ್ ನಟನೆಯ ಅಸುರನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
45 ವರ್ಷದ ನಟ ನಿತೀಶ್ ವೀರಾ ಅಗಲಿಕೆಗೆ ಕಾಲಿವುಡ್ ನಟ-ನಟಿಯರು ಕಂಬನಿ ಮಿಡಿದಿದ್ದಾರೆ