ಹುಬ್ಬಳ್ಳಿ: ಸಾರಿಗೆ ಬಸ್ ನಿರ್ವಾಹಕ (ಕಂಡಕ್ಟರ್)ರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಬಂಡಿವಾಡ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರವಲಯದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೌಲಾಸಾಬ್ ದಾವಲ್ ಸಾಬ್ ಮಿಶ್ರಿಕೋಟಿ ಆತ್ಮಹತ್ಯೆ ಮಾಡಿಕೊಂಡ ಕಂಡಕ್ಟರ್ ಆಗಿದ್ದಾರೆ. ಸಾರಿಗೆ ಇಲಾಖೆಯಲ್ಲಿ ನೌಕರನಾಗಿರುವ ಮೌಲಾಸಾಬ್ ಕಳೆದ ಹಲವು ದಿನಗಳಿಂದ ಕರ್ತವ್ಯದಿಂದ ಅಮಾನತುಗೊಂಡಿದ್ದ. ಬೈಕ್ ಕಳ್ಳತನ ಪ್ರಕರಣದ ಆರೋಪದಲ್ಲಿ ಮನನೊಂದುಕೊಂಡಿರುವ ಮೌಲಾಸಾಬ್ ಗ್ರಾಮದ ಜಮೀನಿನಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನೂ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೇತ್ ನೋಟ್ ಬರೆದು ಸಾವಿಗೆ ಶರಣಾಗಿದ್ದು, ಸುದ್ದಿ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಪ್ರಕರಣವನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.