ಬೆಂಗಳೂರು: ಕ್ರೈಸ್ಟ್ ಕಾಲೇಜು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ರಾಧಾರವಿ ಹಾಗೂ ಪಳನಿವೇಲು ಬಂಧಿತರು.
ಬಂಧಿತ ಆರೋಪಿಗಳು ವಿಶಾಖಪಟ್ಟಣಂ ನಿಂದ ಗಾಂಜಾ ಖರೀದಿಸಿ, ತಮಿಳುನಾಡಿನ ನೇರಳಗಿರಿಯಲ್ಲಿ ಗಾಂಜಾ ಶೇಖರಿಸಿ, ಅದನ್ನ ಬೆಂಗಳೂರಿಗೆ ತಂದು ನಗರದ ಪ್ರತಿಷ್ಠಿತ ಕಾಲೇಜ್ ಬಳಿ ಮಾರಾಟ ಮಾಡುತ್ತಿದ್ಧರು.
ಆರೋಪಿಯೊಬ್ಬ ನೀಡಿದ ಸುಳಿವಿನ ಮೇಲೆ ಹೆಣ್ಣೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 30 ಲಕ್ಷ ಮೌಲ್ಯದ 120 ಕೆ ಜಿ ಗಾಂಜಾ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.