ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳು ಒತ್ತಡ ಹೇರಿದ್ದರಿಂದ ಸಾರಿಗೆ ನೌಕರನೊಬ್ಬ ಡಿಪೋ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗದಗದಲ್ಲಿ ನಡೆದಿದೆ.
ಗದಗ ಡಿಪೋ ಡ್ರೈವರ್ ಕಮ್ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ ವಸಂತ ರಾಮದುರ್ಗ ಆತ್ಮಹತ್ಯೆಗೆ ಯತ್ನಿಸಿದ ನೌಕರ.
ಗದಗದಲ್ಲಿ ಸಾರಿಗೆ ಮುಷ್ಕರದ ಮುಂದಾಳತ್ವ ವಹಿಸಿದ ವಸಂತ ರಾಮದುರ್ಗ ಮನೆಗೆ ಅಧಿಕಾರಿಗಳು ಬಂದು ಡ್ಯೂಟಿಗೆ ಹಾಜರಾಗುವಂತೆ ಒತ್ತಡ ಹೇರಿದ್ದಾರೆ. ಹೀಗಾಗಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಡಿಪೋ ಬಳಿ ಇದ್ದ ಸಾರಿಗೆ ನೌಕರರಿಂದ ಗದಗ ಜಿಮ್ಸ್ ಆಸ್ಪತ್ರೆ ರವಾನಿಸಿದ್ದು, ಚಿಕಿತ್ಸೆ ನೀಡಲಾಗಿದ್ದು, ಯಾವುದೇ ಅಪಾಯ ಇಲ್ಲದೇ ಪಾರಾಗಿದ್ದಾರೆ.