ಮಂಡ್ಯ: ಕಳೆದ ಆರೇಳು ತಿಂಗಳುಗಳಿಂದ ಜನರು-ಜಾನುವಾರುಗಳಿಗೆ ಕಿರುಕುಳ ನೀಡುತ್ತಿದ್ದ ಚಿರತೆಯೊಂದನ್ನು ಜೀವಂತವಾಗಿ ಸೆರೆ ಹಿಡಿದು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ತಿರುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಳೆದ 6 – 7 ತಿಂಗಳಿಂದ ಕುರಿ-ಮೇಕೆ, ಹಸು-ಎಮ್ಮೆಗಳ ಮೇಲೆ ದಾಳಿ ನಡೆಸುವ ಮೂಲಕ ಜಾನುವಾರುಗಳು ಮತ್ತು ರೈತಾಪಿ ಜನಕ್ಕೆ ತೊಂದರೆ ನೀಡುತ್ತಿತ್ತು. ಇದರಿಂದಾಗಿ ತಿರುಗನಹಳ್ಳಿ ಗ್ರಾಮದ ಜನರು ಆಂತಕದಲ್ಲಿರು.
ಚಿರತೆಯನ್ನು ಬಲೆ ಮತ್ತು ಕಟ್ಟಿಗೆಯ ಮೂಲಕ ಸೆರೆ ಹಿಡಿದು ಕಟ್ಟಿ ಹಾಕಿದ ಊರ ಜನರು, ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ವಶಕ್ಕೆ ಪಡೆದ ಚಿರತೆಯನ್ನು ಬಂಡೀಪುರದ ಕಾಡಿಗೆ ಬಿಟ್ಟಿದ್ದಾರೆ.