ಮೀಟರ್ ಬಡ್ಡಿ ದಂಧೆ ಕಿರುಕುಳ ತಾಳಲಾರದೇ ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಾಸನದ ರಿಂಗ್ ರಸ್ತೆಯಲ್ಲಿ ರಾಜು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಜು (ಡಿಶ್ ಮಂಜು) ಎಂಬುವವರಿಂದ 3 ಲಕ್ಷ ರೂ. ಸಾಲ ಪಡೆದಿದ್ದ ರಾಜು, 8 ಚೆಕ್, 100 ರೂ. ಸ್ಟಾಂಪ್ ಪೇಪರ್ ನೀಡಿದ್ದರು. ಸಾಲ ಪಡೆದ ನೂರು ದಿನಕ್ಕೆ ಅಸಲು ಬಡ್ಡಿ ತೀರಿಸಿ ಮತ್ತೆ ಮಂಜುವಿನಿಂದ 2 ಲಕ್ಷ ಸಾಲ ಪಡೆದಿದ್ದರು. ಒಟ್ಟು ಸಾಲ, ಬಡ್ಡಿ ಸೇರಿ 9 ಲಕ್ಷ ಮರು ಪಾವತಿ ಮಾಡಿರುವುದಾಗಿ ರಾಜು ಆತ್ಮಹತ್ಯೆಗೆ ಯತ್ನಿಸುವ ಮುನ್ನ ಪತ್ರದಲ್ಲಿ ಬರೆದಿದ್ದಾರೆ.
ಸಾಲ ತೀರಿಸಿದ್ದರೂ ಮೀಟರ್ ಬಡ್ಡಿ ನೀಡುವಂತೆ ಕಿರುಕುಳ ನೀಡುತ್ತಿದ್ದು, ನನ್ನ ಸಾವಿಗೆ ಮಂಜು ಕಾರಣ ಎಂದು ರಾಜು ಆರೋಪಿಸಿದ್ದಾರೆ.