ಮೊಬೈಲ್ ನಲ್ಲಿ ಆಡಬೇಡ ಅಂತ ಹೆತ್ತವರು ಬೈದಿದ್ದರಿಂದ ನೊಂದ 15 ವರ್ಷದ ಬಾಲಕ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನೋಯ್ಡಾದಲ್ಲಿ ನಡೆದಿದೆ.
ಮೊಬೈಲ್ ನಲ್ಲಿ ಆಡಬೇಡ ಎಂದು ಹೆತ್ತವರು ಬೈದಿದ್ದರಿಂದ ನೊಂದ 7ನೇ ತರಗತಿ ವಿದ್ಯಾರ್ಥಿ ಗುರುವಾರ ರಾತ್ರಿ ಮನೆಯಿಂದ ಹೊರಗೆ ಹೋಗಿದ್ದ, ಎಷ್ಟು ಹೊತ್ತಾದರೂ ಮಗ ಮನೆಗೆ ಮರಳದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ತನಿಖೆ ನಡೆಸಿದ ಪೊಲೀಸರಿಗೆ ಶುಕ್ರವಾರ ಬೆಳಿಗ್ಗೆ ಬಾಲಕನ ಶವ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಪತ್ತೆಯಾಗಿದ್ದು, ಬಾಲಕ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.