ಹೆಣ್ಣು ಕೊಟ್ಟ ಮಾವ ಕಣ್ಣು ಕೊಟ್ಟ ದೇವರು ಎಂಬ ಗಾದೆ ಮಾತಿದೆ. ಆದರೆ ಹುಡುಗಿ ಕೊಡಲು ಮನಸ್ಸಿಲ್ಲದ ಪೋಷಕರು ಪ್ರಿಯಕರ ಕಣ್ಣು ಕೀಳಿಸಿದ ಅಮಾನವೀಯ ಘಟನೆ ಬೆಂಗಳೂರಿನ ಹುಳಿಮಾವುನಲ್ಲಿ ನಡೆದಿದೆ.
ಹುಡುಗಿ ನೋಡಿದರೆ ತಾನೇ ಪ್ರೀತಿಸುವುದು ಅಂತ ಯುವತಿ ಪೋಷಕರು ಸುಪಾರಿ ಕೊಟ್ಟು ಪ್ರಿಯಕರನ ಎರಡು ಕಣ್ಣುಗಳನ್ನು ಡ್ರ್ಯಾಗನ್ ನಿಂದ ಇರಿಸಿ ಕೀಳಿಸಿ ಮೃಗೀಯವಾಗಿ ನಡೆದುಕೊಂಡಿದ್ದಾರೆ.
ಹುಳಿಮಾವು ನಿವಾಸಿ ಚರಣ್ ಎಂಬ ಯುವಕ ಇದೀಗ ಪ್ರೀತಿಸಿದ ತಪ್ಪಿಗೆ ಕಣ್ಣು ಕಳೆದುಕೊಂಡಿದ್ದಾರೆ. ಚಾಕುವಿನಿಂದ ಹಲ್ಲೆ ಮಾಡಿ ಕಣ್ಣಿಗೆ ಹಾನಿ ಮಾಡಿದ ಗಣೇಶ, ಸೋಮು, ಚಿಂಟು ಮತ್ತು ಮನು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಹುಲಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಕಣ್ಣು ಕಿತ್ತು ಜೀವಕ್ಕೆ ಹಾನಿ ಮಾಡಿದರ ರಕ್ಷಣೆಗೆ ಪೊಲೀಸರು ನಿಂತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.
ಹುಳಿಮಾವು ಮತ್ತು ಸಿದ್ದಾಪುರ ಪೊಲೀಸರ ವಿರುದ್ಧ ಚರಣ್ ಅಜ್ಜಿ ಸರೋಜಮ್ಮ, ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಮಗ ಕಣ್ಣು ಕಳೆದುಕೊಳ್ಳುವ ಸ್ಥಿತಿಯಲ್ಲೂ ಸೂಕ್ತ ಚಿಕಿತ್ಸೆ ಕೊಡಿಸದೇ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ.