ಮಲೇಷ್ಯಾದಲ್ಲಿ ಸೆಕ್ಯೂರೆಟಿ ಗಾರ್ಡ್ ಕರ್ತವ್ಯ ನಿರ್ವಹಿಸುವ ವೇಳೆ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಜೊತೆ ಅನ್ನ ಸೇವಿಸುತ್ತಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಲೇಷ್ಯಾದಲ್ಲಿ ಕರ್ತವ್ಯದ ವೇಳೆ ಸೆಕ್ಯೂರೆಟಿ ಗಾರ್ಡ್ ತಾನು ತಂದಿದದ ಟಿಫನ್ ಬಾಕ್ಸ್ನಲ್ಲಿದ್ದ ಅನ್ನ ಮತ್ತು ಈರುಳ್ಳಿ, ಬೆಳ್ಳುಳ್ಳಿ ಸೇವಿಸಿದ್ದಾರೆ. ಇದನ್ನು ಗಮನಿಸಿದ ಸ್ನೇಹಿತ ಅಪಿಟ್ ಲಿಡ್ ಎಂಬಾತ ಫೇಸ್ ಬುಕ್ ನಲ್ಲಿ ಪ್ರಕಟಿಸಿದ ಫೋಟೊ ಈಗ ವೈರಲ್ ಆಗಿದೆ.
ಸೆಕ್ಯೂರೆಟಿ ಗಾರ್ಡ್ ಬೇಯಿಸಿದ ಅನ್ನವನ್ನು ತಾಳ್ಮೆಯಿಂದ ಸೇವಿಸುತ್ತಿದ್ದು, ಇದನ್ನು ಗಮನಿಸಿದ ಸ್ನೇಹಿತ, ಟಿಫನ್ ಬಾಕ್ಸ್ ಮತ್ತು ಸೆಕ್ಯೂರಿಟಿ ಗಾರ್ಡ್ ಭೋಜನ ಮಾಡುತ್ತಿರುವ ಎರಡೂ ಫೋಟೋ ಹೊಡೆದು ಪೋಸ್ಟ್ ಮಾಡಿದ್ದಾನೆ.
ಈ ಸೆಕ್ಯೂರೆಟಿ ಗಾರ್ಡ್ ಬಂದ ವೇತನದ ಬಹುತೇಕ ಹಣವನ್ನು ಊರಿನಲ್ಲಿರುವ ಮನೆಯವರಿಗೆ ಕಳುಹಿಸಿಕೊಟ್ಟು ತನಗಾಗಿ ಸ್ವಲ್ಪ ಹಣ ಮಾತ್ರ ಇರಿಸಿಕೊಳ್ಳುತ್ತಿದ್ದ. ಆ ಸ್ವಲ್ಪ ಹಣದಲ್ಲಿ ಈ ರೀತಿ ಊಟ ಮಾಡುತ್ತಾ ಜೀವನ ಸಾಗಿಸುತ್ತಿದ್ದ.
ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 6000 ಮಂದಿ ಷೇರ್ ಮಾಡಿದ್ದಾರೆ. ಸಾವಿರಾರು ಜನರು ಸೆಕ್ಯೂರೆಟಿ ಗಾರ್ಡ್ ಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.