ಚತ್ತೀಸ್ ಗಢದಲ್ಲಿ 22 ಯೋಧರನ್ನು ಹತ್ಯೆಗೈದ ಪ್ರಕರಣದಲ್ಲಿ ನಕ್ಸಲರು ವಿಕೃತಿ ಮೆರೆದಿದ್ದು, ಪೊಲೀಸರನ್ನು ಹತ್ಯೆಗೈಯ್ಯುವ ಮುನ್ನ ಅವರ ಕೈಬೆರಳು ಕತ್ತರಿಸಿ ಅಮಾನುಷವಾಗಿ ನಡೆಸಿಕೊಂಡಿದ್ದು ಅಲ್ಲದೇ ಹುತಾತ್ಮ ಯೋಧರ ಶವಗಳಿಂದ ಶಸ್ತ್ರಾಸ್ತ್ರ ಮತ್ತು ಶೂಗಳನ್ನು ಹೊತ್ತೊಯ್ದದ್ದಾರೆ.
ಸುಖ್ಮಾ- ಬಿಜಾಪುರ್ ಜಿಲ್ಲೆಯ ದಟ್ಟ ಅರಣ್ಯದಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದು, 31 ಮಂದಿ ಗಾಯಗೊಂಡಿದ್ದರು. ಇದರಲ್ಲಿ ನಾಲ್ವರು ಸಿಆರ್ ಪಿಎಫ್ ಯೋಧರು ಹಾಗೂ 14 ಪೊಲೀಸರು ಸೇರಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಪೊಲೀಸ್ ಅಧಿಕಾರಿಯನ್ನು ಹತ್ಯೆಗೈಯುವ ಮುನ್ನ ನಕ್ಸಲರು ಕೈ ಬೆರಳು ಕತ್ತರಿಸಿದ್ದು ಅಲ್ಲದೇ ಅವರ ದೇಹದ ಮೇಲಿದ್ದ ಬುಲೆಟ್ ಪ್ರೂಫ್, ಶೂ ಹಾಗೂ ಶಸ್ತ್ರಾಸ್ತ್ರ ಸೇರಿದಂತೆ ಉಪಯುಕ್ತ ವಸ್ತುಗಳನ್ನು ಹೊತ್ತೊಯ್ದಿದ್ದಾರೆ ಎಂದು ಸಿಆರ್ ಪಿಎಫ್ ಡೈರೆಕ್ಟರ್ ಜನರಲ್ ಕುಲದೀಪ್ ಸಿಂಗ್ ವಿವರಿಸಿದ್ದಾರೆ.