ಪತ್ನಿಯನ್ನು ತನ್ನ ಜೊತೆ ಕಳುಹಿಸಲು ನಿರಾಕರಿಸಿದ್ದಕ್ಕಾಗಿ ಅಳಿಯ, ಮಾವನ ಕತ್ತು ಸೀಳಿದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ನಡೆದಿದೆ.
ಅಳಿಯ ಜಗದೀಶ್ ಕಂಬಳಿ ಕೃತ್ಯದಿಂದ ಮಾವ ಶಿವಪ್ಪ ದಳವಾಯಿ ತೀವ್ರ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಗದೀಶ್ ಕಂಬಳಿ ಎಂಬಾತನ ಜೊತೆ ಶಿವಪ್ಪ ದಳವಾಯಿ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ್ದರು. ಆದರೆ ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ತವರು ಮನೆ ಹಳ್ಳಿಕೇರಿಯಲ್ಲಿಯೇ ಪತ್ನಿ ಉಳಿದುಕೊಂಡಿದ್ದರು.
ಪತ್ನಿಯನ್ನು ಕರೆದುಕೊಂಡು ಹೋಗಲು ಜಗದೀಶ್ ಕಂಬಳಿ ಕರೆಯಲು ಗ್ರಾಮಕ್ಕೆ ಬಂದಿದ್ದು, ಆದರೆ ಮಗಳನ್ನು ಕಳುಹಿಸಲು ಶಿವಪ್ಪ ನಿರಾಕರಿಸಿದ್ದರಿಂದ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದೆ. ಸಿಟ್ಟಿಗೆದ್ದ ಜಗದೀಶ್ ಕಂಬಳಿ ಬ್ಲೇಡ್ ನಿಂದ ದಾಳಿ ಮಾಡಿ ಕೊಲೆಗೆ ಯತ್ನಿಸಿದ್ದಾನೆ.
ತಂದೆಯ ಜೀವ ಉಳಿಸಲು ಬಂದ ಮಗ ಪ್ರವಿಣ ದಳವಾಯಿಯ ಕುತ್ತಿಗೆಗೂ ಬ್ಲೇಡ್ ನಿಂದ ಜಗದೀಶ್ ದಾಳಿ ಮಾಡಿದ್ದು, ಈ ಕುರಿತು ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.