ರಾಯಚೂರು : ಸಾರ್ವಜನಿಕರು ಓಡಾಡುವ ರಸ್ತೆ ಪಕ್ಕದಲ್ಲಿ ವೈದ್ಯಕೀಯ ತ್ಯಾಜ್ಯ ಬಿಸಾಡಿರುವ ಘಟನೆ ರಾಯಚೂರು ನಗರದಲ್ಲಿ ನಡೆದಿದೆ. ನಗರದ ಆಶಾಪುರ ರಸ್ತೆಯಿಂದ ದಾತರ್ ನಗರಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ, ರಕ್ತ ಪರೀಕ್ಷೆಗೆ ತೆಗೆದುಕೊಳ್ಳುವಂತಹ ಟ್ಯೂಬುಗಳನ್ನು ಹಾಗೂ ಇನ್ನಿತರೆ ವೈದ್ಯಕೀಯ ಪರೀಕ್ಷೆಗೆ ಬಳಸುವಂಥ ಸಾಮಗ್ರಿಗಳನ್ನು. ಎಲ್ಲೆಂದರಲ್ಲಿ ಎಸೆದಿದ್ದು ಇದಕ್ಕೆ ಸ್ಥಳೀಯ ಜನತೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಡಿಎಚ್ಒ ಅವರ ಗಮನಕ್ಕೆ ತರಲಾಗಿದ್ದರೂ, ಯಾವುದೇ ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ. ಇಲ್ಲಿಯ ಸುತ್ತಮುತ್ತಲಿನ ಆಸ್ಪತ್ರೆ ಮತ್ತು ಲ್ಯಾಬ್ ಗಳೇ ಈ ರೀತಿ ತ್ಯಾಜ್ಯವನ್ನು ಎಸೆದಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಕೊರೊನಾ ಅಂತಹ ಮಹಾಮಾರಿಗೆ ಜಿಲ್ಲೆಯ ಜನತೆ ಆತಂಕಕ್ಕೊಳಗಾಗಿದ್ದಾರೆ, ಇನ್ನೂ ಈ ರೀತಿ ವೈದ್ಯಕೀಯ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆಯುವುದರಿಂದ ರೋಗ ಬರುತ್ತದೆ ಎಂಬ ಆತಂಕ ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ, ಕೂಡಲೇ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.