ಮೆಕ್ಸಿಕೋ: ಮೆಕ್ಸಿಕೋದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ನೊಚೆ ಬ್ಯೂನಾ ಗಣಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ಮತ್ತೊಂದು ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ಮೃತರಾದವರು ಮೆಕ್ಸಿಕನ್ ನಾಗರಿಕರಾಗಿದ್ದಾರೆ. ಇವರೆಲ್ಲರೂ ಅದಿರು ಉತ್ಪಾದಿಸುವ ನೊಚೆ ಬ್ಯೂನಾ ಗಣಿಗೆ ತೆರಳುತ್ತಿದ್ದರು ಎನ್ನಲಾಗಿದೆ.
ಮೃತರಿಗೆ ಪರಿಹಾರ ಘೋಷಿಸುವುದಾಗಿ ಗಣಿ ಅಧಿಕಾರಿಗಳು ಹೇಳಿದ್ದಾರೆ. ಹಳೆಯ ಮಿನಿ ಬಸ್ಗಳಲ್ಲಿ ಗಣಿ ಕಾರ್ಮಿಕರು ಇಲ್ಲಿ ದಿನವೂ ಪ್ರಯಾಣಿಸುವುದು ಸಾಮಾನ್ಯ. ಗಣಿಗೆ ತೆರಳುವ ಮಾರ್ಗದ ರಸ್ತೆಗಳು ಕೆಲವೆಡೆ ಹದಗೆಟ್ಟಿರುವುದರಿಂದಲೂ ಕೆಲವೊಮ್ಮೆ ಅಪಘಾತಗಳು ಸಂಭವಿಸುತ್ತವೆ. ಆದರೆ ಈ ಅಪಘಾತಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ. ಯನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.